ತೀರ್ಥಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಶಿಕ್ಷಣವನ್ನು ನೀಡಬೇಕು ಹಾಗೆ ಶಾಲೆಯ ಹೆಚ್ಚಿನ ಅಭಿವೃದ್ಧಿ ಪಡಿಸುವಲ್ಲಿ ನಾನು ಸಹ ಸಹಕರಿಸುತ್ತೇನೆ ಎಂದು ಕಾಂಗ್ರೆಸ್ ಯುವ ಮುಖಂಡ ಆದರ್ಶ ಹುಂಚದಕಟ್ಟೆ ಹೇಳಿದರು.
ಗುರುವಾರ ಹೊನ್ನೇತಾಳು ಸರ್ಕಾರಿ ಶಾಲೆಗೆ ನೋಟು ಬುಕ್ ವಿತರಣೆ ಕಾರ್ಯಕ್ರಮಕ್ಕೆ ಆದರ್ಶ್ ಹುಂಚದಕಟ್ಟೆ ಆಗಮಿಸಿ ಶಾಲೆಯ ಸರ್ವತೋಮುಖ ಅಭಿವೃದ್ಧಿ ಹೊಂದಿದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ನೀಡ್ ಬೇಸ್ ಸಂಸ್ಥೆಯ ವತಿಯಿಂದ ನೀಡಲಾದ ನೋಟ್ ಬುಕ್ ವಿತರಣೆ ಮಾಡಿದರು.ಹೊಸೂರು ಗುಡ್ಡೆಕೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಶಾಂಕ್ ಹೆಗಡೆ ಹೊನ್ನೇತಾಳು ಶಾಲೆ ರಾಜ್ಯದಲ್ಲೇ ಉತ್ತಮ ಸಾಧನೆ ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.