ಮಲೆನಾಡಿನಲ್ಲಿ ಮಳೆ ಹೆಚ್ಚಾಗಿದ್ದು, ಪಿಕಪ್ ವಾಹನ ಆಯಾ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭದ್ರ ನದಿಗೆ ನೀರು ಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮೃತ ಯುವಕ ಶಮಂತ್ (23), ಕಾಫಿ ತೋಟದ ಕಾರ್ಮಿಕರನ್ನು ಕೊಂಡೊಯ್ಯುವ ಕೆಲಸ ಮಾಡುತ್ತಿದ್ದ. ಕಳಸ ಭಾಗದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಲ್ಲಿ ಬಾಡಿಗೆಗೆಂದು ಕಳಸಕ್ಕೆ ಹೋಗಿ ಹಿಂತಿರುಗಿ ಬರುವಾಗ, ಚಲಿಸುತ್ತಿದ್ದ ಪಿಕಪ್ ವಾಹನವೊಂದು ಚಾಲಕನ ಆಯತಪ್ಪಿ ಭದ್ರಾ ನದಿಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ವಾಹನ ನದಿಗೆ ಪಲ್ಟಿಯಾಗಿ ಬಿದ್ದ ಪರಿಣಾಮವಾಗಿ ಪಿಕಪ್ ವಾಹನದಲ್ಲಿದ್ದ ಚಾಲಕ ಶಮಂತ್ ಸಾವನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು l ಕಾಡಾನೆ ದಾಳಿ: ಕಾರ್ಮಿಕ ಮಹಿಳೆ ಸಾವು
ಈ ಘಟನೆ ಕಳಸ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ. ಮಗನ ಸಾವಿನ ಕುರಿತು ಕುಟುಂಬದವರ ಆಕ್ರಂದನ ಹೆಚ್ಚಾಗಿದೆ.
