ಬಳ್ಳಾರಿ ನಗರದ ಓಣಿಯೊಂದರಲ್ಲಿ ಬಾಲ್ಯ ವಿವಾಹ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರ ಮೇಲೆ ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ.
ಬಾಲಕಿಗೆ ವಿವಾಹ ಮಾಡಿಸಿರುವ ಕುರಿತು ಮಕ್ಕಳ ಸಹಾಯವಾಣಿಗೆ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸ್‌ರು ಖುದ್ದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅಪ್ರಾಪ್ತಳ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಮಗುವಿನ ವಯಸ್ಸು 17 ವರ್ಷ 9 ತಿಂಗಳು ಆಗಿರುವುದು ಎಂದು ತಿಳಿದು ಬಂದಿದೆ.
ಬಳ್ಳಾರಿ ನಗರದ ಕಲ್ಯಾಣ ಮಂಟದಲ್ಲಿ ಯುವಕನೊಂದಿಗೆ ತನಗೆ ಪೋಷಕರು ಮದುವೆ ಮಾಡಿಸಿರುವುದಾಗಿ ಬಾಲಕಿ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ. ಬಾಲಕಿಯ ತಂದೆ-ತಾಯಿ, ವಿವಾಹವಾದ ಯುವಕ ಹಾಗೂ ಆತನ ತಂದೆ-ತಾಯಿ ವಿರುದ್ಧ ಪೊಲೀಸರು ಬಾಲ್ಯ ವಿವಾಹ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ : ಬಳ್ಳಾರಿ | ಶರಣ ಸಂಸ್ಕೃತಿಯಿಂದ ನಾಡು ಸಮೃದ್ಧವಾಗಿದೆ: ಕೆ ವಿ ನಾಗರಾಜ ಮೂರ್ತಿ