ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಮುಕ್ತಗೊಳಿಸುವಂತೆ ಮತ್ತು ಬಲ್ಡೋಟಾ ವಿಸ್ತರಣೆ ವಿರೋಧಿಸಿ ಜುಲೈ 23ರಂದು ಕೊಪ್ಪಳ ಜಿಲ್ಲಾಡಳಿತದ ಮುಂದೆ ಜಾನುವಾರುಗಳನ್ನು ಜಮಾವಣೆ ಮಾಡಿ ಪ್ರತಿಭಟನೆ ನಡೆಸಲಾಗಿತ್ತು. ಈ ಘಟನೆ ಸಂಬಂಧ ಇದೀಗ ಘಟನೆ ಸಂಬಂಧ 9 ಮಂದಿ ವಿರುದ್ಧ ದೂರು ದಾಖಲಾಗಿದೆ.
4 ಸಾವಿರಕ್ಕೂ ಹೆಚ್ಚು ಜಾನುವಾರುಗಳೊಂದಿಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ರಕ್ಷಣಾ ವೇದಿಕೆ ಜಂಟಿ ಸಮಿತಿ ಬಲ್ಡೋಟಾ ಕೈಗಾರಿಕಾ ಕಾರ್ಖಾನೆ ಬಸಾಪುರ ಕೆರೆಯನ್ನು ಅತಿಕ್ರಮಿಸಿಕೊಂಡಿದ್ದನ್ನು ಖಂಡಿಸಿ ಕುರಿ, ದನಕರುಗಳನ್ನು ನುಗ್ಗಿಸಿ ಕೆರೆ ನೀರನ್ನು ಪ್ರಾಣಿಗಳಿಗೆ ಕುಡಿಸುವುದರ ಮೂಲಕ ಶಾಂತಿಯುತ ಪ್ರತಿಭಟನೆ ನಡೆಸಲಾಗಿತ್ತು.

ಬಲ್ಡೋಟಾ ಕಂಪನಿಯ ಸೆಕ್ಯೂರಿಟಿ ಮ್ಯಾನೇಜರ್ ಕಂಪನಿಯ ಪರವಾಗಿ ಜಾನುವಾರುಗಳ ಮಾಲಿಕರ ಹಾಗೂ ಪ್ರತಿಭಟನೆ ಬೆಂಬಲಿಸಿದ ಸಾಮಾಜಿಕ ಹೋರಾಟಗಾರರ ಮೇಲೆ ದೂರು ದಾಖಲಿಸಿದ್ದಾರೆಂದು ಹೇಳಲಾಗುತ್ತಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಒಟ್ಟು 9 ಜನ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿರುವುದು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕೊಪ್ಪಳ | ಅನಧಿಕೃತವಾಗಿ ಕೆರೆ ಒತ್ತುವರಿ; ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ