ಎರಡು ದಿನಗಳ ಸಂಚಾರ ದಟ್ಟಣೆ ಬಳಿಕ ಈಗ ಕೂಳೂರು ಸೇತುವೆಯಲ್ಲಿ ವಾಹನ ಸಂಚಾರ ಪುನರಾರಂಭವಾಗಿದ್ದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಕುಳೂರು ಸೇತುವೆಯಲ್ಲಿ ಜುಲೈ 22ರಂದು ವಾಹನ ದಟ್ಟಣೆ ಕಂಡು ಬಂದಿತ್ತು. ಅಲ್ಲದೇ ಜುಲೈ 23ರಂದು ಇಡೀ ದಿನ ಕೊಟ್ಟಾರ-ಪಣಂಬೂರು ಮಾರ್ಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳ ಸಂಚಾರವನ್ನು ಸುಗಮಗೊಳಿಸಲು ಸಾಧ್ಯವಾಗದೆ ಇತ್ತ ಪೊಲೀಸರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಬೆಳ್ತಂಗಡಿ | ವರದಕ್ಷಿಣೆ ಕಿರುಕುಳ: ಪತ್ನಿ ಕೊಲೆಗೆ ಯತ್ನ, ಪತಿಯ ಬಂಧನ
ಸೇತುವೆಯಲ್ಲಿ ಸರಿಯಾದ ಕ್ಯೂರಿಂಗ್ ಖಚಿತ ಪಡಿಸಿಕೊಳ್ಳಲು ಅಂಚುಗಳ ಮೇಲೆ ಕಾಂಕ್ರೀಟ್ ಪದರಗಳನ್ನು ಹಾಕಲಾಗಿದ್ದು, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಹೀಗಾಗಿ ಈ ಭಾಗದಲ್ಲಿ ವಾಹನಗಳು ನಿಧಾನವಾಗಿ ಚಲಿಸಬೇಕಾಗಿದೆ.
ಸೇತುವೆಯ ಎರಡೂ ಬದಿಗಳಲ್ಲಿರುವ ಸಂಪರ್ಕ ರಸ್ತೆಗಳಲ್ಲಿ ಇಂಟರ್‌ಲಾಕ್ ಅಳವಡಿಸಲಾಗಿದೆ. ಅದರೂ ಸೇತುವೆಯಲ್ಲಿ ಇನ್ನೂ ಹಲವಾರು ಗುಂಡಿಗಳು ಹಾಗೇ ಇವೆ. ಮಳೆಗಾಲ ಮುಗಿದ ಬಳಿಕ ಸೇತುವೆಯ ಮೇಲ್ಮಯನ್ನು ಮತ್ತೆ ದುರಸ್ತಿ ಮಾಡಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಮೂಲಗಳೂ ಸ್ವಪ್ಟಪಡಿಸಿದೆ.
