ಕರ್ತವ್ಯದ ವೇಳೆ ಶಾಲೆಯ ಬಿಸಿಯೂಟ ಕೋಣೆಯ ಮುಂದೆ ಮದ್ಯಪಾನ ಮಾಡಿ ಮಲಗಿದ್ದ ಮಸ್ಕಿ ತಾಲೂಕಿನ ಗೋನಾಳ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ನಿಂಗಪ್ಪ ಅವರನ್ನು ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮುಖ್ಯಗುರು ನಿಂಗಪ್ಪ ಪ್ರತಿನಿತ್ಯ ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದ ಹಾಗೂ ಮಕ್ಕಳಿಗೆ ಪಾಠ ಮಾಡದೇ ಅಸಭ್ಯವಾಗಿ ವರ್ತಿಸುತ್ತಿದ್ದ ಇದರ ಬಗ್ಗೆ ಪಾಲಕರು ಶಿಕ್ಷಣ ಇಲಾಖೆಗೆ ದೂರು ನೀಡಿದರೂ ಕ್ರಮವಾಗಿರಲಿಲ್ಲ, ನಿಂಗಪ್ಪ ಎಂದಿನಂತೆ ಗುರುವಾರವೂ ಮದ್ಯಪಾನ ಮಾಡಿ ಶಾಲೆಯ ಬಿಸಿಯೂಟ ಕೋಣೆಯ ಮುಂದೆ ಮಲಗಿದ್ದ ಈ ಕುರಿತು ಈ ದಿನ.ಕಾಂ ಸೇರಿ ಕೆಲ ಮಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿತ್ತು, ಇದನ್ನುಗಮನಿಸಿ ಶುಕ್ರವಾರ ರಾಜ್ಯ ಹಾಗೂ ಸ್ಥಳೀಯ ದಿನಪತ್ರಿಕೆಗಳಲ್ಲಿಯೂ ಸುದ್ದಿ ಪ್ರಕಟವಾಗಿತ್ತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮದ್ಯಪಾನ ಮಾಡಿ ಶಾಲೆಯ ಬಾಗಿಲಿಗೆ ಮಲಗಿದ ಶಿಕ್ಷಕ
ಬಳಿಕ ಇಂದು ಸಿಂಧನೂರು ಬಿಇಒ ಅವರು ಸಿ.ಆರ್ ಒಇ,ಬಿಆರ್ ಪಿ ಅವರಿಂದ ವರದಿ ಪಡೆದು ದುರ್ಬಡತೆ,ಕರ್ತವ್ಯಲೋಪದ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿದ್ದಾರೆ.
