ವಿಧಾನಪರಿಷತ್ತಿನ ಕಲಾಪಗಳ ನ್ಯೂನತೆ ಸರಿಪಡಿಸಲು ಮುಖ್ಯಮಂತ್ರಿ ಚಂದ್ರು ಮನವಿ

Date:

Advertisements

ವಿಧಾನಪರಿಷತ್ತಿನ ಗೌರವವನ್ನು ಎತ್ತಿ ಹಿಡಿಯುವ ಕಾರ್ಯಕ್ಕೆ ಸಭಾಪತಿಗಳು ಮುಂದಾಗಬೇಕು. ಕಾರ್ಯಕಲಾಪಗಳಲ್ಲಿ ಅನೇಕ ನ್ಯೂನತೆಗಳಿವೆ. ಅವುಗಳನ್ನು ಸರಿಪಡಿಸಿ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಮಾಡಿದರು.

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಶನಿವಾರ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಪರಿಷತ್ತಿನ ಮಾಜಿ ಸದಸ್ಯರು ಆಗಿರುವ ಮುಖ್ಯಮಂತ್ರಿ ಚಂದ್ರು ಅವರು ಅಂದಿನ ಸದನಗಳಲ್ಲಿ ಅವರ ಜೊತೆಗಿನ ಮಹತ್ವದ ಚರ್ಚೆ ಮತ್ತು ಅವರ ಪ್ರತಿವಾದಗಳನ್ನು ಮೆಲಕು ಹಾಕಿ ಸಭಾಪತಿಗಳಾದ ಹೊರಟ್ಟಿಯವರು ಪ್ರಶಂಸಿಸಿದರು.

Advertisements

ಈ ವೇಳೆ ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಿ, “ಇತ್ತೀಚೆಗೆ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಾಜ್ಯದ ಜನರು ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದು, ರಾಜ್ಯದಲ್ಲಿ ಸುಭದ್ರ ಸರ್ಕಾರ ನಡೆಸಲು ಜನರು ನಾಂದಿ ಹಾಡಿದ್ದಾರೆ. ಯಾವುದೇ ಬದಲಾವಣೆಗಳಿಲ್ಲದೇ ತಾವು ವಿಧಾನಪರಿಷತ್ತಿನ ಸಭಾಪತಿಯಾಗಿ ಮುಂದುವರೆದಿದ್ದಿರಿ” ಎಂದು ಅಭಿನಂದನೆ ಸಲ್ಲಿಸಿದರು.

“ಇತ್ತೀಚಿಗಷ್ಟೇ ಮುಗಿದ ಬಜೆಟ್ ಅಧಿವೇಶನದಲ್ಲಿ ವಿಧಾನಪರಿಷತ್ತಿನ ಕಾರ್ಯಕಲಾಪಗಳನ್ನು ಗಮನಿಸಿದಾಗ ಅನೇಕ ನ್ಯೂನತೆಗಳು ಕಂಡು ಬಂದಿವೆ. ಗೌರವಾನ್ವಿತ ಸಚಿವರು ಸಭೆಗೆ ತಡವಾಗಿ ಬರುವುದು, ಸದಸ್ಯರ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದಿರುವುದು, ವಿಪಕ್ಷಗಳ ಸದಸ್ಯರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡದೇ ಅವರು ಬಾವಿಗಿಳಿಯುವಂತೆ ಮಾಡಿರುವುದು, ಗೊಂದಲಮಯ ವಾತಾವರಣ ಸೃಷ್ಟಿಸಿ ಕಲಾಪದ ಕಾಲಹರಣ, ವಿಪಕ್ಷದ ಸದಸ್ಯರು ಹದ್ದು ಮೀರಿ ವರ್ತಿಸಿದ್ದು, ವಿನಾಕಾರಣ ಕಲಾಪದ ಸಮಯ ಪೋಲಾಗಿರುವುದು, ರಾಜ್ಯ ಸಮಸ್ಯೆಗಳನ್ನು ಚರ್ಚಿಸಲು ಇರುವ ಸದನವನ್ನು ರಾಜಕೀಯ ದೋಷಾರೋಪಣೆಗೆ ದುರ್ಬಳಕೆ ಸೇರಿದಂತೆ ಹಲವು ನ್ಯೂನತೆಗಳಿವೆ. ವಿಧಾನ ಪರಿಷತ್ತಿನ ಮಾಜಿ ಸದಸ್ಯನಾಗಿ ಹಾಗೂ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಾಗಿ ಈ ನ್ಯೂನತೆಗಳನ್ನು ಸರಿಪಡಿಸಿ ಎಂದು ವಿನಂತಿಸುತ್ತಿದ್ದೇನೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಯುವತಿ ಮೇಲೆ ಅನುಮಾನ; ರಾಡ್‌ನಿಂದ ಹಲ್ಲೆ ಮಾಡಿದ ಪ್ರಿಯಕರ

ಸಭಾಪತಿಗಳಾಗಿ ತಾವು ಅನೇಕ ಸಂದರ್ಭಗಳಲ್ಲಿ ಕಲಾಪಗಳನ್ನು ಸರಿದಾರಿಗೆ ತರುವ ಕೆಲಸವನ್ನು ಮಾಡಿರುವಿರಿ. ಅದಾಗ್ಯೂ ಕೆಲವು ಸದಸ್ಯರುಗಳ ವರ್ತನೆ, ಸಭಾಧ್ಯಕ್ಷರಾದ ತಮ್ಮ ವರ್ಚಸ್ಸನ್ನು ಕಡಿಮೆ ಮಾಡುತ್ತಿರುವುದು ನಾಡಿನ ಜನರಿಗೆ ಮತ್ತು ನಿಯಮ ಪಾಲಿಸುವ ಸದಸ್ಯರಿಗೆ ಬೇಸರ ತಂದಿದೆ.

ನಾಡಿನ ಹೆಮ್ಮೆಯ ಪ್ರತೀಕವಾಗಿರುವ ಈ ಸದನವು ರಾಜ್ಯದ ಅಭಿವೃದ್ದಿಯ ಚರ್ಚೆಗಳಿಗೆ ವೇದಿಕೆಯಾಗಲಿ ಎಂದು ಆಶಿಸುತ್ತೇನೆ. ನಮ್ಮ ಪಕ್ಷವು ವಿಧಾನ ಮಂಡಲದಲ್ಲಿ ಇಲ್ಲದಿದ್ದರೂ, ರಾಷ್ಟ್ರೀಯ ಪಕ್ಷವಾಗಿ ಹೊರಗಿನಿಂದಲೇ ಸರ್ಕಾರದ ನೀತಿ ನಡವಳಿಕೆಯ ಬಗ್ಗೆ ಮಾತನಾಡುತ್ತಾ ಜನರ ಹಿತ ಕಾಪಾಡುತ್ತೇವೆ ಎಂದು ಹೇಳಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X