ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಜಿಲ್ಲಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಪುನಶ್ಚೇತನ ಸಂಭಂದ ‘ ಮಿಂಚಿನ ಸಂಚಾರ ‘ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಚಾಮರಾಜನಗರ ಜಿಲ್ಲೆಯ ಅಂಗನವಾಡಿ ಕೇಂದ್ರಗಳನ್ನು ಪುನಶ್ಚೇತನ ಮಾಡುವ ದಿಕ್ಕಿನಲ್ಲಿ ಈ ಮಿಂಚಿನ ಸಂಚಾರ ಕಾರ್ಯಕ್ರಮ ಒಂದು ಉತ್ತಮ ಹೆಜ್ಜೆಯಾಗಿದ್ದು, ಇದನ್ನು ಕೇವಲ ಒಂದು ತಾಲೂಕಿಗೆ ಸೀಮಿತಗೊಳಿಸದೆ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಎಲ್ಲಾ ಅಂಗನವಾಡಿ ಕೇಂದ್ರಗಳ ಪರಿಶೀಲನೆ ನಡೆಸಲು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ?ಚಾಮರಾಜನಗರ | ಜಿಲ್ಲೆಯಾದ್ಯಂತ ಆಧಾರ್ ನೋಂದಣಿ ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ
ಚಾಲನೆ ನೀಡುವ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜವರೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸುರೇಶ್, ನಿರೂಪಣಾಧಿಕಾರಿ ಮಂಜುಳಾ, ಅಧಿಕಾರಿಗಳಾದ ಚೆಲುವರಾಜು, ನಾಗೇಶ್ ಜಯಶೀಲ, ಹೇಮಾವತಿ ಜಿಲ್ಲಾ ಸಂಯೋಜಕರಾದ ಶಿವಸ್ವಾಮಿ, ಚೇತನ್ ಸೇರಿದಂತೆ ಎಲ್ಲಾ ಮೇಲ್ವಿಚಾರಕಿಯರು, ಸಿಬ್ಬಂದಿಗಳು ಇದ್ದರು.