ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ ಅನುಭವ ಮಂಟಪ ಪರಿಸರದಲ್ಲಿ ನಾಳೆ (ಜುಲೈ 27) ರಂದು ಒಂದು ದಿನದ ಶರಣ ತತ್ವ ಶಿಬಿರ ನಡೆಯಲಿದೆ.
ಅನುಭವ ಮಂಟಪ ಬಸವಕಲ್ಯಾಣ ಹಾಗೂ ಶರಣ ಸಂಸ್ಕೃತಿ ವಿಚಾರ ವೇದಿಕೆ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದ್ದು, ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಲಿದ್ದಾರೆ. ಆಳಂದ ತಾಲೂಕಿನ ಉಸ್ತುರಿ ವಿರಕ್ತ ಮಠದ ಕೋರಣೇಶ್ವರ ಮಹಾಸ್ವಾಮೀಜಿ ನೇತ್ರತ್ವ ವಹಿಸಲಿದ್ದಾರೆ.
ವಿಜಯಪುರದ ಶರಣತತ್ವ ಚಿಂತಕ ಡಾ.ಜೆ.ಎಸ್.ಪಾಟೀಲ್ ಅವರು ʼಲಿಂಗಾಯತ ಧರ್ಮದ ಉದಯ ಮತ್ತು ಪ್ರಸ್ತುತ ಸ್ಥಿತಿಗತಿʼ ವಿಷಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀಕಾಂತ ಸ್ವಾಮಿ, ಬಸವರಾಜ ಕೊರಕೆ, ಬಸವರಾಜ ತೊಂಡಾರೆ, ಸಿದ್ರಾಮ ಕಾಮಣ್ಣಾ, ಸಂಜುಕುಮಾರ ಸುಗುರೆ, ಪ್ರವೀಣ ಕಾಡಾದಿ, ಶಿವಶರಣಪ್ಪ ಸಂತಾಜಿ, ಸುಭಾಷ ಕುದುರೆ, ಹಣಮಂತ ಧನಶೆಟ್ಟಿ, ಕಾಶಿನಾಥ ಹೋಳಕಡೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಬಸವಾದಿ ಶರಣರ ನೈಜಿ ಇತಿಹಾಸ ಕುರಿತು ತಿಳಿದುಕೊಳ್ಳಲು, ಲಿಂಗಾಯತ ಧರ್ಮದ ಪ್ರಸ್ತುತ ಸ್ಥಿತಿಗತಿ ಕುರಿತು ಸಂವಾದ ನಡೆಸಲು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಯೋಜಕರಾದ ರವೀಂದ್ರ ಕೋಳಕೂರ, ಆಕಾಶ ಖಂಡಾಳೆ ಹಾಗೂ ಶಿವಕುಮಾರ ಶೆಟಗಾರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
