ಬೆಳಗಾವಿ : ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಆರೋಪಿ ಬಂಧನ

Date:

Advertisements

ಕೇವಲ 20 ಸಾವಿರ ರೂಪಾಯಿ ಸಾಲದ ವಿವಾದದ ಹಿನ್ನೆಲೆಯಲ್ಲಿ, ವ್ಯಕ್ತಿಯೊಬ್ಬನನ್ನು ಕಬ್ಬಿನ ಗದ್ದೆಯಲ್ಲಿ ತಲೆ ಮೇಲೆ ಕಲ್ಲು ಎತ್ತಿ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಶೇಡಬಾಳ ಗ್ರಾಮದಲ್ಲಿ ಜುಲೈ 20 ರಂದು ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹತ್ಯೆಗೊಳಗಾದವನು ಶೇಡಬಾಳದ ಶಶಿಕಾಂತ್ ಹೊನ್ನಕಾಂಬಳೆ (40). ನಳೀನ್ ಎಂಬುವವರ ಕಬ್ಬಿನ ಗದ್ದೆಯಲ್ಲಿ ಶಶಿಕಾಂತ್ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಕಾಗವಾಡ ಠಾಣಾ ಪೊಲೀಸರು ತನಿಖೆ ಆರಂಭಿಸಿ, ಕೊನೆಗೆ ಶೇಡಬಾಳದ ಮೈಮುದ್ದಿನ್ ಜಮಾದಾರ್ ಎಂಬಾತನನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆ ಬೆಳೆವಿರುವ ಮಾಹಿತಿ ಪ್ರಕಾರ, ಶಶಿಕಾಂತ್ ಬಡ್ಡಿ ವ್ಯವಹಾರ ಮಾಡುತ್ತಿದ್ದ. ಮೈಮುದ್ದಿನ್ ಅವನಿಂದ ಮೊದಲು ಸಾಲ ಪಡೆದಿದ್ದು, ಬಡ್ಡಿ ಸಹಿತ ಹಣವನ್ನು ತೀರಿಸಿದ್ದ. ನಂತರ ಮತ್ತೆ 20 ಸಾವಿರ ರೂಪಾಯಿ ಸಾಲ ಪಡೆದು, ಬಡ್ಡಿ ಹೆಚ್ಚಿದೆ ಎಂಬ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.

ಜುಲೈ 19 ರಂದು ಶಶಿಕಾಂತ್ ಇಟ್ಟುಕೊಂಡಿದ್ದ ಹೂವಿನ ಅಂಗಡಿಯ ಬಳಿ ಹಣ ಕೊಡುವ ನೆಪದಲ್ಲಿ ಮೈಮುದ್ದಿನ್, ಶಶಿಕಾಂತ್‍ನನ್ನು ಗದ್ದೆಗೆ ಕರೆದುಕೊಂಡು ಹೋಗಿ, ತಲೆಯ ಮೇಲೆ ಕಲ್ಲು ಎತ್ತಿ ಹತ್ಯೆಗೈದನು. ಬಳಿಕ, ಕೊಲೆಗೆ ಬಳಸಿದ ಕಲ್ಲು ಹಾಗೂ ಶಶಿಕಾಂತ್‍ನ ಮೊಬೈಲ್ ಫೋನ್ ಅನ್ನು ಕೃಷಿ ಹೊಂಡಕ್ಕೆ ಎಸೆದು ಸಾಕ್ಷ್ಯ ನಾಶ ಮಾಡಲು ಯತ್ನಿಸಿ, ಸ್ಥಳದಿಂದ ಪರಾರಿಯಾಗಿದ್ದ.

ಮೈಮುದ್ದಿನ್ ವೃತ್ತಿಯಲ್ಲಿ ಚಿಕನ್ ಬಿರಿಯಾನಿ ಅಂಗಡಿ ಹೊಂದಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಮೌಲಿಕ ತನಿಖೆ ಕೈಗೊಂಡಿರುವ ಕಾಗವಾಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

ಜಿಲ್ಲಾ ಎಸ್‌ಪಿ ಡಾ. ಭೀಮಾಶಂಕರ್ ಗುಳೇದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಕೇವಲ 20 ಸಾವಿರ ರೂಪಾಯಿ ಸಾಲದ ಕಾರಣಕ್ಕೆ ಈ ಹೃದಯವಿದ್ರಾವಕ ಕೊಲೆ ನಡೆದಿದ್ದು, ಆರೋಪಿಯು ಈಗ ಪೊಲೀಸರ ವಶದಲ್ಲಿದ್ದಾನೆ,” ಎಂದರು.

ee dina logo with tagline copy
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಜಾರಕಿಹೊಳಿ ಸಹೋದರರಿಂದ ಹುಕ್ಕೇರಿಯಲ್ಲಿ ಮದ್ಯ–ಮಾಂಸ ಬಾಡೂಟ : ರಮೇಶ ಕತ್ತಿ ಆರೋಪ

ಬೆಳಗಾವಿ ಜಿಲ್ಲೆಯ ಸಹಕಾರಿ ಸಂಘಗಳ ಚುನಾವಣಾ ಹಿನ್ನಲೆಯಲ್ಲಿ ಹುಕ್ಕೇರಿ ತಾಲೂಕಿನ ಹಲವು...

ಬೆಳಗಾವಿ : ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬದಲಾವಣೆ ಪ್ರಿಂಟ್ ಮಿಸ್ಟೇಕ್ ? : ಶಾಸಕ ರಾಜು ಕಾಗೆ

ಬೆಳಗಾವಿ ಜಿಲ್ಲೆಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಶಾಸಕ ರಾಜು ಕಾಗೆ...

ಬೆಳಗಾವಿ : ಸಭೆಯಲ್ಲಿ ಕಣ್ಣೀರು ಹಾಕಿದ ಮಾಜಿ ಸಂಸದ ರಮೇಶ ಕತ್ತಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ದಿವಂಗತ ಮಾಜಿ ಸಚಿವ...

ಬೆಳಗಾವಿ : ನಗರದಲ್ಲಿ ರೈತರ ಪ್ರತಿಭಟನೆ ಎಫ್‌ಐಆರ್ ದಾಖಲು

ಜೈ ಕಿಸಾನ್ ತರಕಾರಿ ಮಾರುಕಟ್ಟೆ ಓಪನ್ ಮಾಡುವಂತೆ ಆಗ್ರಹಿಸಿ ಚೆನ್ನಮ್ಮ ವೃತ್ತದಲ್ಲಿ...

Download Eedina App Android / iOS

X