ಬಸಾಪುರ ಕೆರೆಯಲ್ಲಿ ದನ, ಕುರಿಗಳಿಗೆ ನೀರು ಕುಡಿಸಲು ಬಲ್ಡೋಟಾ ಕಂಪೆನಿ ಒಳಗಡೆ ಹೋದ ರೈತರು ಮತ್ತು ಕುರಿಗಾಹಿಗಳ ಮೇಲೆ ಅಲ್ಲಿನ ಸಿಬ್ಬಂದಿಗಳು ರೈತರನ್ನು ಹೊಡೆದು ಕುರಿಗಾಯಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
“ಬಸಾಪುರ ಕೆರೆಯನ್ನು ಸಾರ್ವಜನಿಕರು ಮತ್ತು ದನ, ಕುರಿ ಸೇರಿದಂತೆ ಇತರೆ ಜಾನುವಾರುಗಳಿಗೆ ಉಪಯೋಗಿಸಲು ಮುಕ್ತವಾಗಿ ಇಡಬೇಕೆಂಬ ಹೈಕೋರ್ಟ್ ಆದೇಶವಿದ್ದರೂ, ಕೂಡ ಕಂಪೆನಿ ತನ್ನ ಸಿಬ್ಬಂದಿಗಳ ಮಾಲಕ ಇಂತಹ ವರ್ತನೆಯನ್ನು ಮಾಡಿಸುತ್ತಿದೆ” ಎಂದು ರೈತರು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ವಿದ್ಯಾರ್ಥಿಗಳು ಕಷ್ಟಪಟ್ಟು ಓದದೆ, ಇಷ್ಟಪಟ್ಟು ಓದಬೇಕು: ಡಾ. ರುದ್ರೇಶ್ ಮೇಟಿ ಸಲಹೆ
“ಸಾರ್ವಜನಿಕ ಕೆರೆಯನ್ನು ಮಾರಿದ ಜಿಲ್ಲಾಡಳಿತಕ್ಕೆ ಧಿಕ್ಕಾರವಿರಲಿ. ಕಂಪೆನಿಯ ಸಿಬ್ಬಂದಿಗಳು ಇಂದು ಕುರಿಗಾಹಿಗಳ ಮೇಲೆ ಹಲ್ಲೆ ನಡೆಸಿದ್ದಾರೆ, ಮುಂದಿನ ದಿನಗಳಲ್ಲಿ ಕೊಪ್ಪಳ ಜನತೆಯ ಮೇಲೆಯೂ ಹಲ್ಲೆ ಮಾಡಿದರೆ ಆಶ್ಚರ್ಯಪಡಬೇಕಾಗಿಲ್ಲ. ಹಾಗಾಗಿ ಕೂಡಲೇ ಕೊಪ್ಪಳದ ಜನತೆ ಎಚ್ಚೆತ್ತುಕೊಳ್ಳಬೇಕು. ಇದರ ವಿರುದ್ಧ ಪ್ರಜ್ಞಾವಂತ ಜನ ಎದ್ದು ನಿಲ್ಲಬೇಕು, ಒಗ್ಗಟ್ಟಾಗಬೇಕು, ಹೋರಾಟ ಮಾಡಬೇಕು. ಸರ್ಕಾರದ ಮೇಲೆ ಒತ್ತಡ ತರಬೇಕು” ಎಂದು ಆಗ್ರಹಿಸಿದರು.