ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳು ಭರ್ತಿಯಾಗಿ ಮೈದುಂಬಿ ಹರಿಯುತ್ತಿದ್ದು, ಸೇತುವೆ ಮೇಲೆ ತುಂಬಿ ಹರಿಯುತ್ತಿರುವ ನೀರಿನ ಪ್ರವಾಹದಲ್ಲಿ ಜಾನುವಾರು ಕೊಚ್ಚಿ ಹೋಗಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುದಮುಡ್ ತಾಂಡದಲ್ಲಿ ನಡೆದಿದೆ.
ಕುದಮುಡ್ ಗ್ರಾಮದ ಗ್ರಾಮ ಲೆಕ್ಕಿಗ ʼಈದಿನʼ ಜೊತೆಗೆ ಮಾತನಾಡಿ, ʼಕುದಮುಡ್ ಗ್ರಾಮದ ನಿವಾಸಿ ದನ ಮೇಯಿಸಲು ಹೋದ ಸಂದರ್ಭದಲ್ಲಿ ಕುದಮುಡ್ ತಾಂಡದ ಹತ್ತಿರ ಮಳೆಗೆ ಭರ್ತಿಯಿಂದ ಸೇತುವೆ ಮೇಲಿಂದ ಜಾನುವಾರು ದಾಟಿಸುವ ವೇಳೆ ನೀರಿನ ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದವು, ಬಳಿಕ ಸ್ವಲ್ಪ ದೂರದಲ್ಲಿ ಹೊಲವೊಂದರ ಬದುವಿನ ಆಸರೆ ಪಡೆದುಕೊಂಡು ಪ್ರಾಣಪಾಯದಿಂದ ಪಾರಾಗಿವೆʼ ಎಂದು ಮಾಹಿತಿ ನೀಡಿದರು.
ದನಕರುಗಳುನ್ನು ಮೇಯಿಸಲು ಹೋದವರು ತುಂಬಿ ಹರಿಯುತ್ತಿರುವ ಹಳ್ಳ, ನದಿ, ಸೇತುವೆ ದಾಟುವ ಪ್ರಯತ್ನ ಮಾಡಿರುವುದು ತಪ್ಪು, ಏನಾದರು ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಇಂತಹ ಸಾಹಸಕ್ಕೆ ದಯವಿಟ್ಟು ಮುಂದಾಗಬಾರದು ಎಂದು ಮನವಿ ಮಾಡಿದರು.
ಇದನ್ನೂ ಓದಿ : ಕಲಬುರಗಿ | ಧಾರಾಕಾರ ಮಳೆ : ದಂಡೋತಿ ಗ್ರಾಮದಲ್ಲಿ ಎರಡು ಮನೆಗಳಿಗೆ ಹಾನಿ
