ಕೌನ್‌ಬನೇಗಾ ಕರೋಡ್‌ಪತಿ ಸ್ಪರ್ಧೆಯಲ್ಲಿ ರೂ.8 ಲಕ್ಷ ಗೆದ್ದಿರುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯಿಂದ ರೂ.7 ಲಕ್ಷಕ್ಕೂ ಅಧಿಕ ಮೊತ್ತ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಕುಪ್ಪೆಪದವಿನಲ್ಲೊಂದು ಸೌಹಾರ್ದತೆಯ ಸಂಕೇತ; ಧರ್ಮ ಬದಿಗಿಟ್ಟು ಸೋದರತೆ ಸಾರಿದ ಮಸೀದಿ
ಮಹಿಳೆ ಫೇಸ್‌ಬುಕ್ ನೋಡುತ್ತಿರುವ ಸಂದರ್ಭದಲ್ಲಿ ಕೌನ್‌ಬನೇಗಾ ಕರೋಡ್‌ಪತಿ ಪ್ರಶ್ನೆಗೆ ಅದರಲ್ಲಿದ್ದ ಲಿಂಕ್‌ನ್ನು ಓಪನ್ ಮಾಡಿ ಉತ್ತರಿಸಿದ್ದರು. ಜು.27 ರಂದು ಅಪರಿಚಿತ ವ್ಯಕ್ತಿ ಮಹಿಳೆಗೆ ಕರೆ ಮಾಡಿ ರೂ.8 ಲಕ್ಷ ಗೆದ್ದಿರುವುದಾಗಿ ಮಾಹಿತಿ ನೀಡಿದ್ದಾನೆ. ಬಳಿಕ ಆತ ಹೇಳಿದಂತೆ ಮಹಿಳೆಯು ಆಧಾರ್, ಪಾನ್ ಕಾರ್ಡ್ ಮತ್ತು ಫೋಟೋ ಕಳುಹಿಸಿದ್ದಾರೆ.
ಅನಂತರ ಆರೋಪಿ ನೋಂದಣಿ ಶುಲ್ಕದ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು ರೂ.7,76,947 ಗೂಗಲ್ ಪೇ ಮೂಲಕ ವರ್ಗಾಯಿಸಿಕೊಂಡಿದ್ದಾನೆ. ಮಹಿಳೆಗೆ ತಾನು ಮೋಸ ಹೋಗಿರುವುದು ಗೊತ್ತಾದ ಬಳಿಕ ಉರ್ವ ಠಾಣೆಗೆ ದೂರು ದಾಖಲಿಸಿದ್ದಾರೆ.