‘ಬಸ್ತರ್ 1862’ ಇತಿಹಾಸವನ್ನು ವಸಾಹತುಶಾಹಿ, ಪ್ರಾದೇಶಿಕ ಕಣ್ಣುಗಳಿಂದ ನೋಡುವ ಮಹತ್ವದ ಕೃತಿ: ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್

Date:

Advertisements

ಬಸ್ತರ್ 1862 ಕೃತಿಯು ವಸಾಹತುಶಾಹಿ ಮತ್ತು ಪ್ರಾದೇಶಿಕ ಕಣ್ಣುಗಳ ಮೂಲಕ ಇತಿಹಾಸವನ್ನು ನೋಡುವ ಮಹತ್ವದ ಕೃತಿಯಾಗಿದೆ. ಈ ಕೃತಿಯು ಕ್ಯಾಪ್ಟನ್ ಗ್ಲಾಸ್‌ಫರ್ಡ್‌ರ ವರದಿ ಮತ್ತು ಮಹಾರಾಜ ಪ್ರವೀರ್ ಚಂದ್ರ ಭಂಜದೇವ್‌ರ ಕಥನದ ಕುರಿತು ಚರ್ಚೆ ಉಂಟುಮಾಡಬಲ್ಲ ಕೃತಿಯಾಗಿದೆ. ಡಾ. ಉಮಾ ರಾಮ್ ಮತ್ತು ಕೆ.ಎಸ್. ರಾಮ್ ಈ ಈ ಕೃತಿಯ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ” ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಹೇಳಿದರು.

ಜುಲೈ 26ರಂದು ಬೆಂಗಳೂರಿನಲ್ಲಿ ನಡೆದ “ಆದಿವಾಸಿಗಳ ಜಗತ್ತು ಮತ್ತು ಅಭಿವೃದ್ಧಿಯ ಸವಾಲುಗಳು” ಎಂಬ ವಿಚಾರ ಸಂಕಿರಣದಲ್ಲಿ ಡಾ. ಉಮಾ ರಾಮ್ ಮತ್ತು ಕೆ.ಎಸ್. ರಾಮ್ ಸಂಪಾದಕತ್ವದ “ಬಸ್ತರ್ 1862: ಎ ಕೊಲೋನಿಯಲ್ ರಿಪೋರ್ಟ್ ಆಂಡ್ ಆನ್ ಆದಿವಾಸಿ ರೆಸಿಸ್ಟನ್ಸ್” ಎಂಬ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ವಿಚಾರ ಸಂಕಿರಣದಲ್ಲಿ ಹಾಜರಿದ್ದ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಪ್ರಾದೇಶಿಕ ನಿರ್ದೇಶಕರಾದ ಡಾ. ಎಸ್. ಕೆ. ಅರುಣಿ ಅವರು, “ಈ ಪುಸ್ತಕವು ಒಂದು ಮಹತ್ವದ ಪ್ರಮುಖ ಐತಿಹಾಸಿಕ ಮೂಲ ದಾಖಲೆಯಾಗಿ ರೂಪುಗೊಂಡಿದೆ” ಎಂದು ಹೇಳಿದರು.

Advertisements

ಭಾರತ ಸರ್ಕಾರದ ಆದಿವಾಸಿ ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟದ ಮಾಜಿ ವ್ಯವಸ್ಥಾಪಕ ನಿರ್ದೇಶಕರಾದ ಮತ್ತು ಹಿಂದೆ ಬಸ್ತರ್‌ ನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಪ್ರವೀರ್ ಕೃಷ್ಣ ಅವರು ಮಾತನಾಡಿ, “ಸೂಕ್ಷ್ಮ-ಮಾರುಕಟ್ಟೆಗಳನ್ನು ಕಲ್ಪಿಸಿದ ಕಾರಣ ಬಸ್ತರ್‌ ನ ಆದಿವಾಸಿಗಳು ಹುಣಸೆ ಮತ್ತು ಇತರ ಅರಣ್ಯಮೂಲದ ಉತ್ಪನ್ನಗಳಿಂದ ತಮ್ಮ ಆದಾಯ ಹೆಚ್ಚಿಸಲು ಸಹಾಯವಾಗಿದೆ” ಎಂದು ಹೇಳಿದರು. ಆದಿವಾಸಿಗಳ ಸಬಲೀಕರಣಕ್ಕೆ ಮಾಡಿದ ಯೋಜನೆಗಳಿಗೆ 2022ರಲ್ಲಿ ಯುಎನ್‌ಓದ ಎಫ್ಎಓ ಮನ್ನಣೆ ಸಿಕ್ಕ ವಿಚಾರವನ್ನೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹೆಣ್ಣು ಮಕ್ಕಳ ಸುರಕ್ಷತೆಗೆ ‘ಶಕ್ತಿಶ್ರೀ’ ಸಾಕೇ?

ಡಾ. ಉಮಾ ರಾಮ್ ಮತ್ತು ಕೆ.ಎಸ್. ರಾಮ್ ಸಂಪಾದಕತ್ವದ ಈ ಪುಸ್ತಕವು ಎರಡು ಮೂಲ ಕೃತಿಗಳ ಆಧಾರದಲ್ಲಿ ರೂಪುಗೊಂಡಿದೆ. ಅದರಲ್ಲಿ ಒಂದು ಈಸ್ಟ್ ಇಂಡಿಯಾ ಕಂಪನಿಯ ಕ್ಯಾಪ್ಟನ್ ಸಿ.ಎಲ್.ಆರ್. ಗ್ಲಾಸ್‌ಫರ್ಡ್‌ ಅವರು ಬರೆದಿರುವ “ಎ ರಿಪೋರ್ಟ್ ಆನ್ ದಿ ಡಿಪೆಂಡೆನ್ಸಿ ಆಫ್ ಬಸ್ತರ್” ಎಂಬ ಕೃತಿ. ಈ ವರದಿ ರಚಿಸಲು ಅವರು ಬಸ್ತರ್ ನ ಒಳಭಾಗಕ್ಕೂ ಹೋಗಿಬಂದಿದ್ದರು. ಬಸ್ತರ್ ನ ಪ್ರಮುಖ ಭಾಗಕ್ಕೆ ಹೋದ ಮೊದಲ ಬಿಳಿಯ ವ್ಯಕ್ತಿ ಎಂದು ಹೆಸರು ಗಳಿಸಿದ್ದರು. ಇನ್ನೊಂದು ಬಸ್ತರ್‌ ನ ಕಾಕತೀಯ ರಾಜವಂಶದ ಕೊನೆಯ ರಾಜರಾದ ಮಹಾರಾಜ ಪ್ರವೀರ್ ಚಂದ್ರ ಭಂಜದೇವ್‌ ರಚಿಸಿದ “ಐ, ಪ್ರವೀರ್, ಆದಿವಾಸಿ ಗಾಡ್” ಎಂಬ ಕೃತಿ. ದುರದೃಷ್ಟವೆಂದರೆ ಮಹಾರಾಜ ಪ್ರವೀರ್‌ ಅವರು 1966ರಲ್ಲಿ ಕೊಲೆಯಿಂದ ಮರಣವನ್ನಪ್ಪಿದರು.

“ಬಸ್ತರ್ 1862” ಮಣಿಪಾಲ್ ಯೂನಿವರ್ಸಲ್ ಪ್ರೆಸ್‌ನಿಂದ ಪ್ರಕಟವಾದ ಪ್ರೊ. ಡಿ.ಎಸ್. ಅಚ್ಯುತ ರಾವ್ ಇತಿಹಾಸ ಸರಣಿಯ 10ನೇ ಕೃತಿಯಾಗಿರುವುದು ಗಮನಾರ್ಹ. ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಮತ್ತು ಡಿಎಸ್‌ಎ ಹಿಸ್ಟರಿ ಸರಣಿಯು ಭಾರತದ ವಿವಿಧ ಐತಿಹಾಸಿಕ ಕಥನಗಳ ಸಂರಕ್ಷಣೆ ಮತ್ತು ಪ್ರಸಾರದ ಕಡೆಗೆ ಗಮನ ನೀಡಿದೆ. ವಿಶೇಷವಾಗಿ ಸಂಶೋಧಕರು ಮತ್ತು ಸಾರ್ವಜನಿಕರಿಗೆ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಗ್ರಂಥಗಳನ್ನು ಒದಗಿಸುತ್ತಿದೆ.

“ಬಸ್ತರ್ 1862” ಕೃತಿಯ ಮುಖ್ಯಾಂಶಗಳು:

“ಬಸ್ತರ್ 1862” ಕೃತಿಯು ಬಸ್ತರ್‌ ಕುರಿತು ವಸಾಹತುಶಾಹಿ ವ್ಯವಸ್ಥೆಯಲ್ಲಿದ್ದ ಪ್ರಮುಖ ವ್ಯಕ್ತಿಯು ಹೊಂದಿದ್ದ ದೃಷ್ಟಿಕೋನ ಮತ್ತು ಸ್ಥಳೀಯ ಆಡಳಿತಗಾರ ಕಂಡ ಬಸ್ತರ್ ಜಗತ್ತಿನ ಕುರಿತು ವಿಸ್ತೃತ ಒಳನೋಟ ನೀಡುತ್ತದೆ. ಕ್ಯಾಪ್ಟನ್ ಸಿ.ಎಲ್.ಆರ್. ಗ್ಲಾಸ್‌ ಫರ್ಡ್ ಅವರು ಬಸ್ತರ್‌ ನ ಒಳಭಾಗಕ್ಕೆ ಭೇಟಿ ನೀಡಿ ಬಸ್ತರ್ ಅನ್ನು ನೋಡಿದ್ದರು. ಬಸ್ತರ್‌ ನ ಕಾಕತೀಯ ರಾಜವಂಶದ ಕೊನೆಯ ರಾಜರಾದ ಮಹಾರಾಜ ಪ್ರವೀರ್ ಚಂದ್ರ ಭಂಜದೇವ್‌ ಬಸ್ತರ್ ಅನ್ನು ಹತ್ತಿರದಿಂದ ನೋಡಿದವರಾಗಿದ್ದರು. ಅವರಿಬ್ಬರ ಒಳನೋಟಗಳು ಈ ಆದಿವಾಸಿ ಇತಿಹಾಸದ ಅವಧಿಯ ಸಮಗ್ರ ತಿಳುವಳಿಕೆಯನ್ನು ಓದುಗರಿಗೆ ನೀಡುತ್ತದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X