ಬೆಂಗಳೂರು – ಹೆಚ್ಚು ಜನಜಂಗುಳಿ ಇರುವ ನಗರ. ಬೃಹತ್ ಉದ್ಯಮಗಳು, ನಾನಾ ಕಾರ್ಖಾನೆಗಳು, ಆಡಳಿತ ಸೌಧಗಳು ಎಲ್ಲವೂ ಇರುವ ಬೃಹತ್ ಪಟ್ಟಣ. ಜೊತೆಗೆ, ನೂರಾರು ಕಿ.ಮೀ ಉದ್ದದ ರಸ್ತೆಗಳೂ ಇವೆ. ಆ ರಸ್ತೆಗಳು ಮತ್ತು ಫುಟ್‌ಪಾತ್‌ನಗಳಲ್ಲಿ ಡಾಂಬರು/ಕಾಂಕ್ರೀಟ್‌ಗಿಂತ ಗುಂಡಿಗಳೇ ಹೆಚ್ಚಿವೆ ಎಂಬ ಆರೋಪಗಳೂ ನಿರಂತರವಾಗಿ ಕೇಳಿಬರುತ್ತಲೇ ಇವೆ. ರಸ್ತೆ ಗುಂಡಿಗಳಿಂದಾಗಿ ಬೆಂಗಳೂರು ಜೀವನವು ‘ಸ್ಕ್ವಿಡ್ ಗೇಮ್’ ಇದ್ದಂತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಆಗ್ಗಾಗ್ಗೆ ವಿನೂತವಾದ ಪ್ರತಿಭಟನೆಗಳನ್ನು ನಡೆಸಿ, ಅಧಿಕಾರಿಗಳ, ಆಳುವವರ ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಇದೀಗ, ಬಾದಲ್ ನಂಜುಂಡಸ್ವಾಮಿ ಮತ್ತು ಕೆಲವು ಪತ್ರಕರ್ತರು ಆನ್‌ಲೈನ್ ಆಟ ‘ಸ್ಕ್ವಿಡ್ ಗೇಮ್’ನ ಪಾತ್ರಗಳಂತೆ ವೇಷಧರಿಸಿ, ಗುಂಡಿಗಳಿಂದ ತುಂಬಿರುವ ಪಾದಚಾರಿ ಮಾರ್ಗಗಳು ಮತ್ತು ರಸ್ತೆಗಳಲ್ಲಿ ಆಟವಾಡಿದ್ದಾರೆ. ಜನರ ಗಮನ ಸೆಳೆದಿದ್ದಾರೆ.
ನಗರದ ಸೇಂಟ್ ಜಾನ್ಸ್ ಆಸ್ಪತ್ರೆಯ ಬಳಿ ಅವರು ‘ಸ್ಕ್ವಿಡ್ ಗೇಮ್‘ ಆಟದ ಪಾತ್ರಗಳಾಗಿ ನಟಿಸಿ, ವಿಡಿಯೋವನ್ನು ಚತ್ರೀಕರಿಸಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದುಮಾಡುತ್ತಿದೆ. ವಿಡಿಯೋದಲ್ಲಿ; ರಸ್ತೆ ಗುಂಡಿಗಳು ಮತ್ತು ಹಾಳಾದ ಪಾದಚಾರಿ ಮಾರ್ಗಗಳಲ್ಲಿ ನಡೆಯಲು, ಕೇಬಲ್‌ಗಳನ್ನು ಹೊಂದಿರುವ ಮಣ್ಣಿನ ದಿಬ್ಬಗಳನ್ನು ಹತ್ತಲು ಹಾಗೂ ಗುಂಡಿಗಳನ್ನು ತಪ್ಪಿಸಲು ಪ್ರಯತ್ನಿಸುವುದು ಕಾಣಿಸುತ್ತದೆ. ವೀಡಿಯೊದ ಒಂದು ಹಂತದಲ್ಲಿ ಕಷ್ಟಕರವಾದ ಹಾದಿಯನ್ನು ದಾಟಲು ಪ್ರಯತ್ನಿಸುವಾಗ ಛಾಯಾಗ್ರಾಹಕ ಅನಂತ ಸುಬ್ರಹ್ಮಣ್ಯಂ ಕೆ ಅವರು ಆಕಸ್ಮಿಕವಾಗಿ ನೆಲಕ್ಕೆ ಬಿದ್ದಂತೆ ಕಾಣಿಸುತ್ತದೆ.
Its Skid game for Namma Bengaluru Journalists! @BBMPCOMM #foootpath #stjohnshospital @anusharavi10 @Ananthaforu @path2shah @Prakash94805561 pic.twitter.com/MhObk128g7
— baadal nanjundaswamy (@baadalvirus) July 24, 2025
ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, “ಸರ್ಕಾರವು ತನ್ನ ನಾಗರಿಕರು ಒಂದೇ ದಿನದ ನಡಿಗೆಯಲ್ಲಿ ಜಿಮ್ನಾಸ್ಟಿಕ್ಸ್ ಮತ್ತು ಕಾರ್ಡಿಯೋ ಅಭ್ಯಾಸ ಮಾಡುವುದನ್ನು ಖಾತ್ರಿಪಡಿಸುತ್ತಿದೆ. ಅವರನ್ನು ಯಾಕೆ ಟೀಕಿಸಬೇಕು” ಎಂದು ಹಾಸ್ಯ ಮಾಡಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಗೇಮ್ ಚೇಂಜರ್ ಆಗ್ತಾರಾ ಪ್ರಶಾಂತ್ ಕಿಶೋರ್?
“ಪಾದಚಾರಿಗಳು ಹೆಲ್ಮೆಟ್ ಮತ್ತು ಮೊಣಕಾಲು ಪ್ಯಾಡ್‌ಗಳನ್ನು ಧರಿಸಬೇಕೆಂದು ನಾನು ಸಲಹೆ ನೀಡುತ್ತೇವೆ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
“ಹಾ! ಹಾಸ್ಯಾಸ್ಪದ, ಆದರೆ ನಾಚಿಕೆಗೇಡಿನ ಸಂಗತಿ. ಬಿಬಿಎಂಪಿ ಸರಿಯಾದ ರಸ್ತೆಗಳು ಮತ್ತು ಚರಂಡಿಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗದಿದ್ದಾಗ ನೀವು ಭೂಗತ ಸುರಂಗಗಳು, ಸ್ಕೈ ಟವರ್ ಹಾಗೂ ಮೂರನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಯೋಜಿಸುತ್ತಿದೆ! ಬಿಬಿಎಂಪಿ ಆದ್ಯತೆಗಳ ಬಗ್ಗೆ ಮಾತನಾಡಬೇಕು!” ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.