ಕೊಪ್ಪಳ ನಗರದ 6ನೇ ವಾರ್ಡಿನ ಮಿಟ್ಟಿಕೇರಿ ಬಡಾವಣೆಯಲ್ಲಿ ಕುಡಿಯುವ ನೀರಿನ ನಳದಲ್ಲಿ ಕೆಸರು ಮಿಶ್ರಿತ ಕಳಪೆ ನೀರು ಬಂದಿದ್ದನ್ನು ಕಂಡು ಸಾರ್ವಜನಿಕರು ಆತಂಕ ಪಡುವಂತಾಗಿದೆ.
“ಸುಮಾರು 15 ದಿನಗಳಿಂದ ಮಿಟ್ಟಿಕೇರಿ ಓಣಿಯ ಜನರು ಕಲುಷಿತ ನೀರನ್ನೇ ತುಂಬಿಸಿಕೊಳ್ಳುತ್ತಿದ್ದಾರೆ. ಆದರೂ ನಗರಸಭೆಯ ಸದಸ್ಯರು, ಅಧಿಕಾರಿಗಳು ಈವರೆಗೂ ಆ ಬಡಾವಣೆಯ ಕಡೆಗೆ ಕಣ್ಣೆತ್ತಿ ನೊಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯ ನಿವಾಸಿ ಪ್ರಭು ಎಂಬುವವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸುಮಾರು 17 ದಿನಗಳಿಂದ ಇದೇ ನಿರು ಪೂರೈಕೆಯಾಗುತ್ತಿದೆ. ಇದನ್ನು ನಗರಸಭೆಯ ಸದಸ್ಯರಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಪ್ರಯೋಜವಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿವೃದ್ಧಿ ಆಡಳಿತಕ್ಕೆ ಹಿಡಿದ ಕೈಗನ್ನಡಿ: ಶಾಸಕ ಜಿ ಎಸ್ ಪಾಟೀಲ
ನಗರಸಭೆಯ ಎಂಜಿನಿಯರ್ ಸೋಮಲಿಂಗ ಎಲ್ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ್ದು, “ಕಳಪೆ ನೀರು ಬರುತ್ತಿರುವುದರ ಬಗ್ಗೆ ನನಗೂ ಮಾಹಿತಿ ಇಲ್ಲ. ಸಾಮಾಜಿಕ ಕಾರ್ಯಕರ್ತರೊಬ್ಬರು ನನಗೆ ತಿಳಿಸಿದ ಮೇಲೆ ಗೊತ್ತಾಗಿದೆ. ಆ ಸಮಸ್ಯೆ ಕುರಿತು ಮಾಹಿತಿ ಸಂಗ್ರಹಿಸಲು ಸಿಬ್ಬಂದಿ ಕಳುಹಿಸಿರುವೆ” ಎಂದರು.