ಸರ್ವಿಸ್ ವೈರ್ ಕಳ್ಳತನ ಮಾಡುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶನಿವಾರ ಗದಗ ಪಟ್ಟಣದಲ್ಲಿ ನಡೆದಿದೆ.
ಸ್ಥಳೀಯರ ಕೈಗೆ ಸಿಕ್ಕ ಕಳ್ಳನನ್ನು ಥಳಿಸಿ, ಬಳಿಕ ಗದಗ ಶಹರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ವೇಳೆ ಅಷ್ಟೊಂದು ಹಿಗ್ಗಾ ಮುಗ್ಗಾ ತಳಿಸಿದರೂ ಸಹ ಈ ಕಳ್ಳ ‘ತಗ್ಗೋದೆಯಿಲ್ಲ’ ಅಂತ ಪುಷ್ಪ ಸಿನಿಮಾದ ಡೈಲಾಗ್ ಹೊಡೆಯುತ್ತಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಜನರು ಹಿಗ್ಗಾಮುಗ್ಗಾ ಗೂಸಾ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ಮನೆ ಬಿಟ್ಟು ಹೋಗಿದ್ದ ಅಕ್ಕ ತಂಗಿ ಪುಣೆಯಲ್ಲಿ ಪತ್ತೆ
ಈತನೊಂದಿಗೆ ಇದ್ದ ಇಬ್ಬರೂ ಕೂಡ ಹಲವು ದಿನಗಳಿಂದ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವೈರ್, ಜೆಸಿಬಿ ಭಾಗಗಳು, ಬ್ಯಾಟರಿ ಮುಂತಾದ ವಸ್ತುಗಳನ್ನು ಕದಿಯುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ವೈರ್‌ಗಳನ್ನು ಸುಟ್ಟು ಉಳಿದ ತಂತಿಗಳನ್ನು ತೂಕದಂತೆ ಮಾರಾಟ ಮಾಡುವ ಮೂಲಕ ಹಣ ಸಂಪಾದಿಸುತ್ತಿದ್ದರು ಎನ್ನಲಾಗಿದೆ.