ಶಿವಮೊಗ್ಗ ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಶಿವಮೊಗ್ಗದ ಮೇಲಿನ ತುಂಗಾನಗರದಲ್ಲ ಘಟನೆ ( ಸಂಭವಿಸಿದೆ.ಮಣಿಕಂಠ (38) ಕೊಲೆಯಾದ ಯುವಕ.
ಈತ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು ಎಂದು ತಿಳಿದುಬಂದಿದೆ. ತಡರಾತ್ರಿ ಮಣಿಕಂಠನ ತಲೆ ಮೇಲೆ ದೊಡ್ಡ ಗಾತ್ರದ ಕಲ್ಲನ್ನು ಎತ್ತಿ ಹಾಕಿ ಹತ್ಯೆ ಮಾಡಿರುವ ಶಂಕೆ ಇದೆ.
ಕೊಲೆಯಾದ ಸ್ಥಳಕ್ಕೆ ಶಿವಮೊಗ್ಗ ಡಿವೈಎಸ್‌ಪಿ ಭೇಟಿ, ಪರಿಶೀಲನೆಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಪ್ರಕರಣವನ್ನ ತುಂಗ ನಗರ ಪೊಲೀಸ್ ಠಾಣೆ ಪಿಐ ಗುರುರಾಜ್ ನೇತೃತ್ವದ ತಂಡ ಬೇಧಿಸಿ ಆರೋಪಿಯನ್ನ ಪತ್ತೆಹಚ್ಚಿದೆ. ಆರೋಪಿಯನ್ನ ಘಟನೆ ನಡೆದು 24 ಗಂಟೆಯಲ್ಲೇ ಪತ್ತೆಹಚ್ಚಿರುವ ಪೊಲೀಸರು ಮೃತನಾದ ಮಣಿಕಂಠನ ಸಹೋದರ ಸಂತೋಷನನ್ನ ಪತ್ತೆಹಚ್ಚಿ ಬಂಧಿಸಿದ್ದಾರೆ.
ಮನೆಯ ವಿಚಾರದಲ್ಲಿ ಸಹೋದರರಿಬ್ಬರ ನಡುವೆ ವ್ಯಾಜ್ಯ ನಡೆದಿದೆ. ಮೊದಲೇ ಸರ್ಕಾರಿ ಜಾಗದಲ್ಲಿದ್ದ ಮೃತ ಮಣಿಕಂಠ ಮತ್ತು ಆತನ ಸಹೋದರರು ಈ ಜಾಗಕ್ಕೆ ಕಿತ್ತಾಡಿಕೊಂಡು ಹೆಣವಾಗಿದ್ದಾರೆ.

ಅನ್ಯಾಯವಾಗಿ ಮಣಿಕಂಠ ಹತನಾಗಿದ್ದಾನೆ. ಸಹೋದರನನ್ನ ಬಂಧಿಸಿರುವ ಪೊಲೀಸರು ಮುಂದಿನ ಪ್ರಕ್ರಿಯೆ ನಡೆಸಿದ್ದಾರೆ. ಮೊದಲು ಗುದ್ದಲಿಯಿಂದ ಹತ್ಯೆ ಮಾಡಿದ್ದ ಸಂತೋಷ ನಂತರ ಸೈಜುಕಲ್ಲನ್ನ ಎತ್ತುಹಾಕಿ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.