ನಗರದ ವಾರ್ಡ ನಂಬರ್ 8ರ ಕೋಟ್ ತಲಾರ್ ಬಡಾವಣೆಯ ಮೋತಿ ಮಸೀದಿಯ ಬಳಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಮತ್ತೊಂದು ಅಂತಸ್ತಿನ ಕಟ್ಟಡದ ಮೇಲೆ ವಾಲಿದ ಘಟನೆಗೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರು ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ತಳಪಾಯ ಕುಸಿದಿದೆ ಎಂದು ಪಾಲಿಕೆಯಿಂದ ನೋಟಿಸ್ ನೀಡಿದ್ದು, ಸಾರ್ವಜನಿಕರು ಕಟ್ಟಡದ ಸುತ್ತಮುತ್ತ ಓಡಾಡಬಾರದು ಎಂದು ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಬಹುಮಹಡಿ ಕಟ್ಟಡ ಮಾಲೀಕರಾದ ಮಹ್ಮದ್ ದಸ್ತಗಿರಿಸಾಬ್ ಅವರು ಕಟ್ಟಡ ನಿರ್ಮಾಣ ಮಾಡುವ ಸಮಯದಲ್ಲಿ ಮಣ್ಣನ್ನು ಎಸ್.ಬಿ.ಸಿ ಪರೀಕ್ಷೆ ಮಾಡದೇ ನುರಿತ ತಜ್ಞೆ ಸಿವಿಲ್ ಇಂಜಿನಿಯರ್ ಅವರಿಂದ ಕಟ್ಟಡದ ರಚನೆ ವಿನ್ಯಾಸ (Structure Design) ಪಡೆದುಕೊಳ್ಳಲಾರದೇ ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದರಿಂದ ತಳಪಾಯ ಕುಸಿದಿರುವುದು ಕಂಡುಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ; ಬಿಜೆಪಿ ಯುವ ನಾಯಕ 6 ತಿಂಗಳು ಗಡಿಪಾರು
ಈಗಾಗಲೇ ಕಟ್ಟಡದ ಮಾಲೀಕರಿಗೆ ಸ್ವಂತ ಖರ್ಚಿನಲ್ಲಿ ಕಟ್ಟಡವನ್ನು ತೆರವುಗೊಳಿಸಲು ಜುಲೈ 26 ರಂದು ನೋಟಿಸ್‌ನ್ನು ಜಾರಿಗೊಳಿಸಲಾಗಿದೆ ಆದ್ದರಿಂದ ಸಾರ್ವಜನಿಕರು ಸದರಿ ಕಟ್ಟಡದ ಹತ್ತಿರ ಓಡಾಡಬಾರದೆಂದು ಪಾಲಿಕೆಯ ವಲಯ ಆಯುಕ್ತ-1 ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
