ಕಛೇರಿ ಉದ್ಘಾಟನೆ ಎನ್ನುವುದು ಕೇವಲ ಒಂದು ಕಟ್ಟಡದ ತೋರ್ಪಡಿಕೆ ಮಾತ್ರವಲ್ಲ, ಅದು ನಮ್ಮ ಸಮಾಜದ ಉದ್ದೇಶಗಳು, ನಂಬಿಕೆಗಳು ಹಾಗೂ ಸೇವಾ ಭಾವನೆಯ ಸಂಕೇತವಾಗಿದೆ. ಸಮುದಾಯದ ಸಹಕಾರವಿದ್ದರೆ ಇಂತಹ ಇನ್ನೂ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಬಹುದು. ನೂತನ ಕಚೇರಿಯಿಂದ ಸಮುದಾಯದ ಎಲ್ಲರಿಗೂ ಉಪಯುಕ್ತ ಸೇವೆ ಸಿಗುವಂತಾಗಲಿ ಎಂದು ನೂರುಲ್ ಇಸ್ಲಾಂ ಮಸೀದಿಯ ಅಧ್ಯಕ್ಷರಾದ ಜನಾಬ್ ಆಸೀಫ್ ಇಕ್ಬಾಲ್ ಹೇಳಿದರು.

ಅವರು ಇಂದು ಅದಿಉಡುಪಿಯ ಮಸೀದಿ ಸಂಕೀರ್ಣದಲ್ಲಿದಲ್ಲಿ ನಮ್ಮ ನಾಡ ಒಕ್ಕೂಟದ ನೂತನ ಕಛೇರಿನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ನಾಡ ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ಮುಸ್ತಾಖ್ ಬೆಳ್ವೆ ಮಾತನಾಡಿ ನಮ್ಮ ನಾಡ ಒಕ್ಕೂಟ ಕಳೆದ ಹಲವಾರು ವರ್ಷಗಳಿಂದ ಸಮುದಾಯದಲ್ಲಿ ಶಿಕ್ಷಣ, ಉದ್ಯೋಗಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾ ಬಂದಿದ್ದು ಈಗಾಗಲೇ ಜಿಲ್ಲೆಯಾಧ್ಯಂತ ಹಲವಾರು ಸಮಾಜಮುಖಿ ಕೆಲಸವನ್ನು ಮಾಡುತ್ತ ಬಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎನ್ ಎನ್ ಓ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಜನಾಬ್ ಮೊಹಮ್ಮೆದ್ ಸಲೀಮ್ ಭಾಯ್, ಪ್ರದಾನ ಕಾಯದರ್ಶಿ ಮೌಲಾನಾ ಝಮೀರ್ ಅಹ್ಮದ್ ರಷಾದಿ, ಖಜಾಂಚಿ ಜನಾಬ್ ಪೀರು ಭಾಯ್, ಸಂಘಟನಾ ಕಾರ್ಯದರ್ಶಿ ಜನಾಬ್ ಹುಸೈನ್ ಹೈಕಾಡಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಜನಾಬ್ ಝಹೀರ್ ನಾಖುದ, ಜಿಲ್ಲಾ ಖಜಾಂಚಿ ಜನಾಬ್ ನಕ್ವಾ ಯಾಹ್ಯಾ, ಎನ್ ಎನ್ ಓ ಕಮ್ಯೂನಿಟಿ ಸೆಂಟರ್ ಉಡುಪಿ ಕಾರ್ಯದರ್ಶಿ ಝಫ್ರುಲ್ಲಾ ಟಿ ಎಂ, ಜನಾಬ್ ಬಿ ಎಂ ಜಾಫರ್ ದುಬೈ, ಜನಾಬ್ ಜಿ ಸಾಧೀಖ್ ದುಬೈ, ಜನಾಬ್ ನಜೀರ್ ಅಲ್ ಫಲಾಹ್ ಜುಬೈಲ್ ಕೆಎಸ್‌ಎ, ಜನಾಬ್ ಅಶ್ರಫ್ ಕುವೈತ್, ಉಡುಪಿ ತಾಲೂಕೂ ಸಮಿತಿಯ ಅಧ್ಯಕ್ಷರಾದ ಜನಾಬ್ ನಝೀರ್ ನೇಜರ್, ಕಾರ್ಯದರ್ಶಿ ಸಾದಿಕ್ ಉಸ್ತಾದ್, ಎನ್ ಎನ್ ಓ ಕಮ್ಯೂನಿಟಿ ಸೆಂಟರ್ನ ಅಧ್ಯಕ್ಷರಾದ ಜನಾಬ್ ಇಬದುಲ್ಲಾ ಉಸ್ಮಾನ್, ಖಜಾಂಚಿ ಜನಾಬ್ ಬಿ .ಸುಲೈಮಾನ್, ಫಾಝಿಲ್ ಆದಿಉಡುಪಿ, ಮಸೀದಿಯ ಇಮಾಮರು ಉಪಸ್ಥಿತರಿದ್ದರು.