ಪ್ರಥಮ ಪಿಯುಸಿ ಓದುತ್ತಿರುವ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದ್ದು, ಯುವಕನ ವಿರುದ್ಧ ಕಲಬುರಗಿ ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಜು.26ರಂದು ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.
ಕಲಬುರಗಿ ತಾಲೂಕಿನ ಗ್ರಾಮವೊಂದರ ನಿವಾಸಿಯಾದ ಯುವಕ ಕಲಬುರಗಿಯ ಇಎಸ್‌ಐಸಿ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದು, ಅದೇ ಗ್ರಾಮದ ನಿವಾಸಿ ಅಪ್ರಾಪ್ತ ಬಾಲಕಿಯ ತಂದೆ ಚಿಕಿತ್ಸೆಗಾಗಿ ಇಎಸ್‌ಐಸಿ ಆಸ್ಪತ್ರೆಗೆ ದಾಖಲಾಗಿದ್ದ. ತಂದೆಯನ್ನು ನೋಡಿಕೊಳ್ಳಲು ಮಗಳು ಜೊತೆಯಲ್ಲಿದ್ದಳು. ಪರಿಚಯಸ್ಥನಾದ ಯುವಕ ಪ್ರತಿ ದಿನ ಗ್ರಾಮಕ್ಕೆ ಹೋಗಿ ಅವರಿಗೆ ಬಟ್ಟೆ ತಂದು ಕೊಡುತ್ತಿದ್ದನು.
ಎಂದಿನಂತೆ ಜು.26ರಂದು ಬೆಳಿಗ್ಗೆ ಯುವಕ ಗ್ರಾಮದಿಂದ ನಿಮ್ಮ ತಂದೆಯ ಬಟ್ಟೆ ತಂದಿರುವೆ ಬಾ ಎಂದು ಯುವತಿಯನ್ನು ಪುಸಲಾಯಿಸಿ ಕರೆದು ಡೆಂಟಲ್ ಕಾಲೇಜಿನ ವಿಶ್ರಾಂತಿ ಗೃಹಕ್ಕೆ ಕರೆದೊಯ್ದು ಬಾಗಿಲು ಹಾಕಿ ಬಾಯಿ ಮುಚ್ಚಿ ಅತ್ಯಾಚಾರ ನಡೆಸಿದ್ದಾನೆ ಎಂದು ಬಾಲಕಿ ತಂದೆ ನೀಡಿದ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡ ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.