ಪೊಲೀಸ್ ಇಲಾಖೆಯು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ನ್ಯಾಯವನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಸಂವಿಧಾನದ ಆಶಯಗಳಿಗೆ ಬದ್ಧವಾಗಿ ನಾನು ನನ್ನ ಕರ್ತವ್ಯ ನಿರ್ವಹಿಸುವೆ ಎಂದು ಎಸ್‌ಪಿ ದೀಪನ್ ಎಂ ಎನ್ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಭರವಸೆ ನೀಡಿದರು.
ಶಿರಸಿ ನಗರ ಪೊಲೀಸ್ ಠಾಣೆಗೆ ತಮ್ಮ ಮೊದಲ ಭೇಟಿ ನೀಡಿ ಮಾತನಾಡಿ, ಠಾಣಾ ಆವರಣದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಏಕತೆ ಹಾಗೂ ಭಾವೈಕ್ಯತೆಯ ಸಂಕೇತವಾಗಿ ಸಸಿಗಳನ್ನು ನೆಡುವ ಮೂಲಕ ಮಹತ್ವದ ಸಂದೇಶ ಸಾರಿದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಶಿರಸಿ ಜ್ಯುವೆಲರಿ ಶಾಪ್‌ನಲ್ಲಿ ಕಳ್ಳತನ: ಆರೋಪಿಗಳು ಸೆರೆ, ಆಭರಣಗಳು ವಶ
ಅವರ ಈ ಸಾಂಕೇತಿಕ ಕಾರ್ಯಕ್ರಮವು ಪೊಲೀಸ್ ಇಲಾಖೆಯು ಕೇವಲ ಕಾನೂನು ಜಾರಿಗೊಳಿಸುವುದಲ್ಲದೆ, ಸಂವಿಧಾನದ ಮೂಲಭೂತ ಮೌಲ್ಯಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂಬುದನ್ನು ಸಾರಿತು.
ಈ ಸಂದರ್ಭದಲ್ಲಿ ಶಿರಸಿ ಉಪವಿಭಾಗದ ಡಿಎಸ್‌ಪಿ ಗೀತಾ ಪಾಟೀಲ್, ಶಿರಸಿ ವೃತ ನಿರೀಕ್ಷಕ ಶಶಿಕಾಂತ ವರ್ಮ ಹಾಗೂ ನಗರ ಠಾಣೆಯ ಪಿಎಸ್‌ಐ ನಾಗಪ್ಪ ಹಾಗೂ ಸಿಬ್ಬಂದಿಗಳು ಇದ್ದರು.