ರಾಯಚೂರು ತಾಲ್ಲೂಕಿನ ಮಲಿಯಬಾದ್ ಗ್ರಾಮದ ಗೋಶಾಲೆಯ ಹತ್ತಿರವಿರುವ ಗುಡ್ಡದ ಪ್ರದೇಶದಲ್ಲಿ ಅಡಗಿಸಿಕೊಂಡಿದ್ದ ಎರಡನೇ ಚಿರತೆಯನ್ನು ವಲಯ ಅರಣ್ಯಾಧಿಕಾರಿಗಳು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಪೂರ್ವದಲ್ಲಿ ಸಿಕ್ಕಿದ್ದ ಮೊದಲ ಚಿರತೆಯ ನಂತರ ಸಹಜವಾಗಿ ಎರಡನೇ ಚಿರತೆ ಅಡಗಿರುವ ಶಂಕೆ ವ್ಯಕ್ತವಾಗಿತ್ತು. ಸ್ಥಳೀಯರ ಸತತ ಮಾಹಿತಿ ಮತ್ತು ನಿಗಾ ಕಾರ್ಯದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಬಲಿಷ್ಠ ಕಾರ್ಯಚರಣೆಗೆ ಮುಂದಾಗಿ ಅಳವಡಿಸಿದ ಬೋನಿಗೆ ಚಿರತೆ ಬಿದ್ದು ಸೆರೆಯಾಗಿದೆ.
ಅರಣ್ಯ ಇಲಾಖೆಯ ಮೇಲಾಧಿಕಾರಿಗಳಾದ ರಾಯಚೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರವೀಣ, ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಗೋವಿಂದರಾಜು.ಕೆ , ಇವರ ಮಾರ್ಗದರ್ಶನದಂತೆ ಬೋನ್ ಗಳನ್ನು ಅಳವಡಿಸಲಾಗಿತ್ತು. ಕೊನೆಗೂ ಕಾರ್ಯಾಚರಣೆಯಿಂದ ಚಿರತೆ ಬೋನಿಗೆ ಬಿದ್ದ ತಕ್ಷಣ ಸ್ಥಳೀಯರು ನಿಟ್ಟುಸಿರು ಬಿಟ್ಟರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ : ಮಹಿಳಾ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ!
ರಾಯಚೂರು ವಲಯದ ಚಿರತೆ ಕಾರ್ಯಚರಣೆ ತಂಡದ ಸಿಬ್ಬಂದಿಗಳಾದ ಉಪ ವಲಯ ಅರಣ್ಯ ಅಧಿಕಾರಿ ಮೌನೇಶ್ ಗಸ್ತು ಅರಣ್ಯ ಪಾಲಕರಾದ ಬಸವರಾಜ್, ಯಲ್ಲಪ್ಪ , ಭೀಮೇಶ್, ವೀರೇಶ್, ಅರಣ್ಯ ವೀಕ್ಷಕರಾದ ಕನಕಪ್ಪ, ವಾಹನ ಚಾಲಕರಾದ ವಿಜಯ್, ಮೌನೇಶ್ ಆಚಾರಿ ಮತ್ತು ದಿನಗೂಲಿ ನೌಕರ, ನರಸಪ್ಪ, ರಮೇಶ್, ಮಂಜು, ಶಿವು ಇವರೆಲ್ಲ ಚಿರತೆಯನ್ನು ಬೋನಿಗೆ ಬೀಳಿಸುವ ಕಾರ್ಯಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.
.
