ಗೋವಾ | ಡಚ್‌ ಪ್ರಜೆ, ವ್ಯಕ್ತಿಗೆ ಕಿರುಕುಳ, ಹಲ್ಲೆ ; ರೆಸಾರ್ಟ್‌ ಸಿಬ್ಬಂದಿ ಬಂಧನ

Date:

Advertisements
  • ಯೋಗ ಕಾರ್ಯಕ್ರಮಕ್ಕಾಗಿ ಗೋವಾಗೆ ಆಗಮಿಸಿದ್ದ ಡಚ್‌ ಪ್ರಜೆ
  • 2 ವರ್ಷದಿಂದ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ

ಡಚ್‌ ಪ್ರಜೆ ಒಬ್ಬರಿಗೆ ಚೂರಿಯಿಂದ ಇರಿದು, ಕಿರುಕುಳ ನೀಡಿ ಅವರಿಗೆ ಸಹಾಯ ಮಾಡಲು ತೆರಳಿದ ಇನ್ನೊಬ್ಬ ವ್ಯಕ್ತಿಗೂ ಚೂರಿಯಿಂದ ಇರಿದಿರುವ ಆರೋಪದಲ್ಲಿ ಉತ್ತರ ಗೋವಾದ ಪರ್ನೆಮ್‌ನಲ್ಲಿರುವ ರೆಸಾರ್ಟ್‌ನ ಸಿಬ್ಬಂದಿ ಅಭಿಷೇಕ್ ವರ್ಮಾನನ್ನು ಪೊಲೀಸರು ಶುಕ್ರವಾರ (ಮಾರ್ಚ್‌ 31) ಬಂಧಿಸಿದ್ದಾರೆ.

ಗಾಯಗೊಂಡ ಡಚ್‌ ಮಹಿಳೆ ಯುರಿಕೊ (29) ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

“ಗುರುವಾರ (ಮಾರ್ಚ್‌ 30) ರಾತ್ರಿ ನಡೆದ ಘಟನೆ ಸಂಬಂಧ ಉತ್ತರಾಖಂಡ್‌ ಮೂಲದ 27 ವರ್ಷದ ಅಭಿಷೇಕ್‌ ವರ್ಮಾನನ್ನು ಬಂಧಿಸಲಾಗಿದೆ. ಈತ ಎರಡು ವರ್ಷಗಳಿಂದ ರೆಸಾರ್ಟ್ ಪರಿಚಾರಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ” ಎಂದು ಗೋವಾ ಪೊಲೀಸರು ಹೇಳಿದ್ದಾರೆ.

Advertisements

“ನಾನು ಈ ತಿಂಗಳ ಆರಂಭದಿಂದ ಪ್ರವಾಸ ಕೈಗೊಂಡಿದ್ದೇನೆ. ಈಗಾಗಲೇ ರಾಜಸ್ಥಾನ ಹಾಗೂ ಮುಂಬೈಗೆ ಭೇಟಿ ನೀಡಿದ್ದೇನೆ. ನಾಲ್ಕು ದಿನದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಗೋವಾಗೆ ಪ್ರವಾಸ ಮಾಡಿದೆ. ಕಾರ್ಯಕ್ರಮಕ್ಕೂ ಮೊದಲು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದೆ. ಊಟದ ಬಳಿಕ ಟೆಂಟ್‌ನಲ್ಲಿ ವಿರಾಮಕ್ಕೆ ತೆರಳಿದೆ. ನಡುರಾತ್ರಿ 2 ಗಂಟೆಗೆ ಟೆಂಟ್‌ಗೆ ಒಬ್ಬ ಅಪರಿಚಿತ ವ್ಯಕ್ತಿ ಆಗಮಿಸಿದ. ಆತ ನನ್ನ ಮೇಲೆ ಎರಗಿದ” ಎಂದು ಡಚ್‌ ಪ್ರಜೆ ಯುರಿಕೊ ಪೊಲೀಸರಿಗೆ ತಿಳಿಸಿದ್ದಾರೆ.

“ಆರೋಪಿಯು ನನ್ನನ್ನು ಹಿಡಿಯಲು ಪ್ರಯತ್ನಿಸಿದ. ನಾನು ಅವನನ್ನು ತಳ್ಳಲು ಪ್ರಯತ್ನಿಸಿದೆ. ನಂತರ ಜೋರಾಗಿ ಕೂಗಿದೆ. ಆಗ ಇನ್ನೊಬ್ಬ ವ್ಯಕ್ತಿ ಟೆಂಟ್‌ನೊಳಗೆ ಧಾವಿಸಿ ಸಹಾಯಕ್ಕೆ ಮುಂದಾದ. ಅಲ್ಲಿಂದ ಓಡಿಹೋದ ಆರೋಪಿ ಬಳಿಕ ಚಾಕುವಿನೊಡನೆ ಬಂದು ನನಗೆ ಹಾಗೂ ಸಹಾಯಕ್ಕೆ ಬಂದಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿದ” ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶ್ರೀರಾಮನವಮಿ | ಬಂಗಾಳ, ಗುಜರಾತ್‌, ಮಹಾರಾಷ್ಟ್ರದಲ್ಲಿ ಗಲಭೆ

“ಸಂತ್ರಸ್ತೆಯಾದ ಡಚ್‌ ಪ್ರಜೆ ಯುರಿಕೊ ಅವರ ರೆಸಾರ್ಟ್‌ನ ಬಾಡಿಗೆ ಟೆಂಟ್‌ಗೆ ರೆಸಾರ್ಟ್‌ ಸಿಬ್ಬಂದಿಯೊಬ್ಬ ಅತಿಕ್ರಮ ಪ್ರವೇಶ ಮಾಡಿದ್ದ. ಡಚ್‌ ಮಹಿಳೆ ಸಹಾಯಕ್ಕಾಗಿ ಚೀರಿದರು. ಆಗ ಮಹಿಳೆ ರಕ್ಷಣೆಗೆ ಸ್ಥಳೀಯ ಪ್ರವಾಸಿಯೊಬ್ಬರು ಅಲ್ಲಿಗೆ ಧಾವಿಸಿದರು. ನಂತರ ಆರೋಪಿ ಅಲ್ಲಿಂದ ಓಡಿ ಹೋದ. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ಆರೋಪಿ ಚಾಕುವಿನಿಂದ ಡಚ್ ಪ್ರಜೆ ಹಾಗೂ ಸ್ಥಳೀಯ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾದ. ಇಬ್ಬರನ್ನೂ ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಲಾಗಿದೆ” ಎಂದು ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ನಿಧಿನ್‌ ವಲ್ಸನ್‌ ಹೇಳಿದ್ದಾರೆ.

ಆರೋಪಿಯ ವಿರುದ್ಧ ಸೆಕ್ಷನ್ 307 (ಕೊಲೆಗೆ ಯತ್ನ), 354 (ಹೆಣ್ಣಿನ ಮೇಲೆ ದೌರ್ಜನ್ಯ), 452 (ಗಾಯ, ಹಲ್ಲೆ ಅಥವಾ ಅತಿಕ್ರಮಣ) ಮತ್ತು 506 (||) (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X