ಚಾಮರಾಜನಗರ ಕ್ರೈಮ್ ಪೊಲೀಸ್ ಠಾಣೆಯ ಪಿಎಸ್ಐ ಸೇರಿದಂತೆ ನಾಲ್ಕು ಮಂದಿ ಮನಿ ಡಬ್ಲಿಂಗ್ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಈ ನಾಲ್ವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಬಿ. ಟಿ. ಕವಿತಾ ಅಮಾನತು ಮಾಡಿದ್ದಾರೆ.
ಸೈಬರ್ ಕ್ರೈಮ್ ನ ಪಿಎಸ್ಐ ಅಯ್ಯನಗೌಡ, ಕಾನ್ಸ್ಟೇಬಲ್ ಮೋಹನ್, ಮಹೇಶ್ ಹಾಗೂ ಟೌನ್ ಸ್ಟೇಷನ್ ಕಾನ್ಸ್ಟೇಬಲ್ ಬಸವಣ್ಣ ತಲೆ ಮರೆಸಿಕೊಂಡಿರುವ ಸಿಬ್ಬಂದಿಗಳಾಗಿದ್ದಾರೆ. ತಮಿಳುನಾಡು ಮೂಲದ ಉದ್ಯಮಿಯೊಬ್ಬರಿಗೆ ₹3.70 ಲಕ್ಷ ರೂಪಾಯಿ ಹಣವನ್ನು ಡಬಲ್ ಮಾಡುವುದಾಗಿ ನಂಬಿಸಿ, ವಂಚಿಸಿದ್ದರು ಎನ್ನಲಾಗಿದೆ.
ತಮಿಳುನಾಡು ಮೂಲದ ಉದ್ಯಮಿ ಸಚ್ಚಿದಾನಂದ ಮೂರ್ತಿಗೆ ಜುಲೈ. 26 ರಂದು ಸಯ್ಯದ್ ಅನ್ಸಾರಿ ಹಾಗೂ ಇಮ್ರಾನ್ ಕರೆ ಮಾಡಿ ₹3 ಲಕ್ಷ ರೂಪಾಯಿ ನೀಡುವಂತೆ ತಿಳಿಸಿ ತಿಂಗಳೊಳಗಾಗಿ ಡಬಲ್ ಮಾಡಿ ಕೊಡುವುದಾಗಿ ನಂಬಿಸಿ ಹೋಟೆಲ್ ಗೆ ಕರೆಸಿರುತ್ತಾರೆ. ಮೊದಲೇ ಪೂರ್ವ ಸಿದ್ಧತೆಯಲ್ಲಿದ್ದ ತಂಡ ಪಿಎಸ್ಐ ಅಯ್ಯನಗೌಡ ಅವರಿಗೆ ತಿಳಿಸಿದಾಗ, ತಕ್ಷಣವೇ ಸಿಬ್ಬಂದಿಗಳೊಡನೆ ಹೋಟೆಲ್ ಮೇಲೆ ದಾಳಿ ಮಾಡಿದಂತೆ ನಾಟಕವಾಡಿದ್ದಾರೆ.
ಪ್ರಕರಣ ದಾಖಲು ಮಾಡಬಾರದು ಎಂದರೆ ₹4 ಲಕ್ಷ ರೂಪಾಯಿ ನೀಡುವಂತೆ ಬಲವಂತವಾಗಿ ಧಮ್ಕಿ ಹಾಕಿದ ಹಿನ್ನಲೆಯಲ್ಲಿ ಉದ್ಯಮಿ ತನ್ನ ಬಳಿಯಿದ್ದ ₹3 ಲಕ್ಷ ರೂಪಾಯಿ ನೀಡಿದ್ದಾರೆ. ಬಳಿಕ ಫೋನ್ ಪೇ ಮೂಲಕ ಅನ್ಸಾರಿ ಎಂಬಾತನ ಖಾತೆಗೆ 70 ಸಾವಿರ ಆನ್ಲೈನ್ ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಕರ್ತವ್ಯಲೋಪ; ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಅಮಾನತ್ತು
ಉದ್ಯಮಿ ಸಚ್ಚಿದಾನಂದ ಮೂರ್ತಿ ಪ್ರಕರಣದ ಸಂಭಂದ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಸಂಪೂರ್ಣ ಮಾಹಿತಿ ಒದಗಿಸಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ಆರೋಪಿಗಳಾದ ಅನ್ಸಾರಿ ಹಾಗೂ ಸಯ್ಯದ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೇ, ನಾಲ್ವರು ಪೊಲೀಸ್ ಸಿಬ್ಬಂದಿಗಳು ಪರಾರಿಯಾಗಿದ್ದು, ಇವರುಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.