ಸಾಗರ, ಜಮೀನಿಗೆ ಬೆಂಕಿ ಹಚ್ಚಿದ ಕೇಸ್ವೊಂದರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕೋರ್ಟ್ ಇಬ್ಬರಿಗೆ ಶಿಕ್ಷೆ ವಿಧಿಸಿದೆ.
ಈ ಪ್ರಕರಣದಲ್ಲಿ ಗಾಳಿಪುರ ಗ್ರಾಮದ ಕಲ್ಲಳ್ಳಿ ಹುಚ್ಚಪ್ಪ ಮತ್ತು ಮಧುಸೂದನ ಎಂಬುವವರಿಗೆ ಸಾಗರದ ಜೆಎಂಎಫ್‌ಸಿ (JMFC) ನ್ಯಾಯಾಲಯವು 2 ವರ್ಷ ಜೈಲು ಶಿಕ್ಷೆ ಮತ್ತು ತಲಾ ₹8,000 ದಂಡವನ್ನು ವಿಧಿಸಿದೆ.
2015ರ ಮಾರ್ಚ್ 1ರಂದು ಆರೋಪಿಗಳು ದೊಂಬೆ ಗ್ರಾಮದ ಎನ್.ಕೆ. ರಾಧಾಮೋಹನ್ ಅವರಿಗೆ ಸೇರಿದ ಜಮೀನಿಗೆ ಬೆಂಕಿ ಹಚ್ಚಿದ್ದರು ಎಂದು ಕೇಸ್ ಆಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಮಾದೇಶ್ ಎಂ. ಪ್ರಕರಣದ ವಿಚಾರಣೆ ನಡೆಸಿದ್ದರು. ಸರ್ಕಾರದ ಪರವಾಗಿ ವಕೀಲ ಚಂದ್ರಶೇಖರ್ ಅವರು ವಾದ ಮಂಡಿಸಿದ್ದರು. ಇದೀಗ ತೀರ್ಪು ಹೊರಬಿದ್ದಿದೆ.