ಹಸಿದ ಹೊಟ್ಟೆಗಳಿಗೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಹಾಲು ಉಣಿಸುವ ಮುಖಾಂತರ ಪಟ್ಟಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ ಸೇರಿ ಬಸವಪರ ಸಂಘಟನೆಗಳಿಂದ ಸೋಮವಾರ ಬಸವ ಪಂಚಮಿ ಆಚರಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಹೊರ ವಲಯದ ಗುಡಿಸಲು ವಾಸಿಗಳ ಸ್ಥಳಕ್ಕೆ ಸ್ಥಳೀಯ ಬಸವಪರ ಪರ ಸಂಘಟನೆಗಳ ಮುಖಂಡರು ತೆರಳಿ ಅಲ್ಲಿನ ಮಕ್ಕಳು, ಮಹಿಳೆಯರು ಸೇರಿದಂತೆ ಜನತೆಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.
ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಬಸವರಾಜ ಕೊಟಗಿ ಮಾತನಾಡಿ, ಸಾಂಪ್ರದಾಯಿಕ ನಾಗರಪಂಚಮಿ ಬದಲಾಗಿ ಬಸವ ಪಂಚಮಿ ಆಚರಿಸುತ್ತಿದ್ದೇವೆ. ಸಮಾಜವನ್ನು ವೈಚಾರಿಕ ಪ್ರಜ್ಞೆಯೊಂದಿಗೆ, ಮಾದರಿ ಸಮಾಜ ರೂಪಿಸಲು ಬಸವಾದಿ ಶರಣರು ಪ್ರಯತ್ನ ನಡೆಸಿದ್ದರು.
ಪೌಷ್ಟಿಕ ಆಹಾರವಾಗಿರುವ ಹಾಲನ್ನು ಕಲ್ಲು ಮಣ್ಣಿನ ಮೇಲೆ ಸುರಿಯುವುದು ಸಲ್ಲದು. ಅದರ ಅವಶ್ಯಕತೆ ಇರುವವರಿಗೆ ಅವನ್ನು ನೀಡಬೇಕು. ಅಂಥ ಮಾನವೀಯ ಕಾರ್ಯಗಳಲ್ಲಿ ಬಸವಪರ ಸಂಘಟನೆಗಳು ಸದಾ ಮುಂದಾಗುತ್ತವೆ ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ | ಗ್ರಾ.ಪಂ. ನೌಕರರಿಗೆ ವೈಜ್ಞಾನಿಕ ಕನಿಷ್ಠ ವೇತನ ಜಾರಿಗೊಳಿಸುವಂತೆ ಸಿಐಟಿಯು ಆಗ್ರಹ
ಜಾಗತಿಕ ಲಿಂಗಾಯತ ಮಹಾಸಭಾದ ಗುರುಲಿಂಗಯ್ಯ ಓದಸೂಮಠ, ಯು.ಆರ್. ಚನ್ನಮ್ಮನವರ, ಶರಣಪ್ಪ ಪೂಜಾರ, ಬಾಲು ರಾಠೋಡ, ಕಳಕಯ್ಯ ಸಾಲಿಮಠ, ಸಾಗರ ವಾಲಿ, ಬಸವರಾಜ ಚೊಳೀನ, ಶರಣಪ್ಪ ಹಡಪದ, ಮಹಾಂತೇಶ ಕಡಗದ, ಬಸವರಾಜ ಅಂಗಡಿ ಸೇರಿ ಇತರರು ಇದ್ದರು.