ಸೊರಬ, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಸೊರಬ ಹಾಗೂ ಮಾನವ ಬಂಧುತ್ವ ವೇದಿಕೆ ಸೊರಬ ಇವರು ವತಿಯಿಂದ ಇಂದು ಸೊರಬ ತಾಲೂಕಿನ ಕಿರಿಯ ಪ್ರಾಥಮಿಕ ಶಾಲೆ ಹೊಳೆಮರೂರು, ಅಲ್ಲಿ ಮಕ್ಕಳಿಗೇ ಹಾಲು ಹಾಗೂ ಸಿಹಿತಿನಿಸು ನೀಡಿ “ಬಸವ ಪಂಚಮಿ” ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ವಕೀಲರು ಹಾಗೂ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಸೊರಬದ ಅಧ್ಯಕ್ಷರಾದ ರಾಜೇಶ್ ಸಿ ಕಾನಡೆ ಅವರು ಮಾತನಾಡಿ, ಜನರಲ್ಲಿ ವೈಚಾರಿಕತೆಯನ್ನು ಮೂಡಿಸುವ ಕೆಲಸ ಮಾಡುವುದು ಅನಿವಾರ್ಯವಾಗಿದೇ ಏಕೆಂದರೆ ನಾಗರಹಾವು ಹಾಲು ಕುಡಿಯುವುದಿಲ್ಲ ಎಂದು ಗೊತ್ತಿದ್ದು ಕೂಡ ಹಾವಿಗೆ ಹಾಲು ನೀಡುವುದು ಕಲ್ಲಿಗೆ ಹಾಲು ಹಾಕುವುದು ಮೌಡ್ಯದ ಪರಮಾಧಿ ಪ್ರಮಾಣವರಿಯಾಗಿದೆ ಎಂದರೂ ಮುಂದುವರೆದು ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಸಂಖ್ಯೆ ವಿಶ್ವದಲ್ಲೇ ಮೂರನೇ ಒಂದು ಭಾಗದಷ್ಟು ಇದ್ದು ಹಾಗೂ 20 21ನೇ ಸಾಲಿನ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 33 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಅದರಲ್ಲಿ ಶೇಕಡ 54% ರಷ್ಟು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಆದ್ದರಿಂದ ಪೌಷ್ಟಿಕ ಯುಕ್ತ ಹಾಲನ್ನು ಕಲ್ಲಿಗೆ ಹುತ್ತಕ್ಕೆ ನೈವೇದ್ಯ ಮಾಡುವ ಬದಲು ಬಡ ಮಕ್ಕಳಿಗೆ ನೀಡೋಣ ಎಂದರು.
ಮಾನವ ಬಂದುತ್ವ ವೇದಿಕೆ ಸೊರಬ ತಾಲೂಕು ಅಧ್ಯಕ್ಷರಾದಂತಹ ನಾಗಪ್ಪ ಮಾಸ್ಟರ್ ಅವರ ಮಾತನಾಡಿ ಜನರಲ್ಲಿ ವೈಚಾರಿಕತೆಯನ್ನು ಮೂಡಿಸುವ ಅನಿವಾರ್ಯವಾಗಿದೆ ಬುದ್ಧ ಬಸವ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನರಲ್ಲಿ ತಿಳಿಸುವ ಕೆಲಸ ಮಾಡಬೇಕು ಈ ರೀತಿಯ ವೈಚಾರಿಕ ಹಬ್ಬವನ್ನು ಆಚರಿಸಬೇಕು ಬಸವ ಪಂಚಮಿ ಕಾರ್ಯಕ್ರಮ ತಮ್ಮ ಮನೆ ವಾರ್ಡ್ ಬೀದಿಗಳಲ್ಲಿ ಕೂಡ ಮಾಡಬೇಕು ವೈಚಾರಿಕತೆಯ ಮನಸ್ಸುಗಳು ಮಕ್ಕಳಲ್ಲಿ ಕೂಡ ಬರಬೇಕು ಎಂದು ಮಾತನಾಡಿದರು.
ನಂತರ ದಲಿತ ಸಂಘರ್ಷ ಸಮಿತಿ ಸಿದ್ದಾಪುರದ ಸಹ ಸಂಚಾಲಕರಾದ ಲಕ್ಷ್ಮಣ್ ಬೋರ್ಕರ್ ಮಾತನಾಡಿ ಹಾವು ಹಾಲು ಕುಡಿಯುವುದಿಲ್ಲ ಏಕೆಂದರೆ ಹಾವು ಮೊಟ್ಟೆ ಇಟ್ಟು ಮರಿ ಮಾಡುವ ಜೀವಿ.ಯಾವ ಪ್ರಾಣಿಗಳು ಮೊಟ್ಟೆ ಇಟ್ಟು ಮರಿ ಮಾಡುತವೆಯೋ ಆ ಪ್ರಾಣಿಗಳು ಹಾಲನ್ನು ಕುಡಿಯುವುದಿಲ್ಲ, ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಪ್ಪ ಎಸ್ ಸಾಗರಕರ್ ರ್ವಹಿಸಿದರು ಈ ಸಮಯದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಹೊಳೆಮರೂರು ಮುಖ್ಯೋಪಾದಾಯರಾದ ಪ್ರಭಾಕರ್, ಶಾಲೆಯ ಅಧ್ಯಕ್ಷರಾದ ಎ ಕೆ ಗಂಗಾಧರ್, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಮೋಹನ್ ಕಾನಡೆ, ಡಾಕ್ಟರ್ ಸುಮಂತ್, ಡಾಕ್ಟರ್ ರಚನಾ,ಶಾಲೆಯ ಎಸ್ ಡಿ ಎಂ ಸಿ ಸದಸ್ಯರು ಆಶಕರ್ಯಕರ್ತೆಯರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು