ಇಂಗ್ಲೆಂಡ್ನ ಈಸಿಜೆಟ್ ವಿಮಾನದಲ್ಲಿ ಬಾಂಬ್ ಬೆದರಿಕೆಯೊಡ್ಡಿ “ಅಲ್ಲಾಹು ಅಕ್ಬರ್” ಎಂದು ಅನುಚಿತವಾಗಿ ವರ್ತಿಸಿದ 41 ವರ್ಷದ ಅಭಯ್ ನಾಯಕ್ ಎಂಬ ವ್ಯಕ್ತಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಈ ವ್ಯಕ್ತಿ ಲಂಡನ್ ಸಮೀಪದ ಲುಟನ್ ಪಟ್ಟಣದ ನಿವಾಸಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೊಗಳಲ್ಲಿ ಇರುವಂತೆ ಆತ ಕೈಗಳನ್ನು ಮೇಲಕ್ಕೆ ಎತ್ತಿ “ಅಮೆರಿಕಕ್ಕೆ ಸಾವು ಮತ್ತು ಟ್ರಂಪ್ಗೆ ಸಾವು” ಎಂದು ಪದೇ ಪದೇ ಕೂಗುತ್ತಿರುವುದು ಕಂಡುಬಂದಿದೆ.
ಈ ಘಟನೆ ಭಾನುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಲಂಡನ್ ಲುಟನ್ ವಿಮಾನ ನಿಲ್ದಾಣದಿಂದ ಹೊರಟ ಈಸಿಜೆಟ್ ವಿಮಾನ 609 ರಲ್ಲಿ ಸಂಭವಿಸಿದೆ. ವಿಮಾನವು ಬೆಳಿಗ್ಗೆ 8.20 ಗಂಟೆ ಸುಮಾರಿಗೆ ಗ್ಲ್ಯಾಸ್ಗೋದಲ್ಲಿ ತುರ್ತು ಭೂಸ್ಪರ್ಶ ಮಾಡಿತು.
ವಿಮಾನದಲ್ಲಿ ಯಾವುದೇ ಸ್ಫೋಟಕಗಳಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸುವವರೆಗೂ ಸಹಪ್ರಯಾಣಿಕರು ಅಭಯ್ ನಾಯಕ್ನನ್ನು ಹಿಡಿದುಕೊಂಡಿದ್ದರು. ವಿಮಾನದ ಸುರಕ್ಷತೆಗೆ ಧಕ್ಕೆ ತಂದ ಆರೋಪದ ಮೇಲೆ ಆರೋಪಿಯನ್ನು ಬಂಧಿಸಿ ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಲಾಯಿತು. ಆರೋಪಿಯನ್ನು ಮುಂದಿನ ವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಕಸ್ಟಡಿಯಲ್ಲಿ ಇರಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರೈತರು ಮಣ್ಣು ತಿನ್ನುವುದು, ಮನುಷ್ಯರು ವಿಷ ಉಣ್ಣುವುದು ನಿಲ್ಲುವುದೆಂದು?
ಅಭಯ್ ನಾಯಕ್ನ ಅನುಚಿತ ವರ್ತನೆಯಿಂದಾಗಿ ಆತನನ್ನು ವಿಮನ ಪ್ರಯಾಣದಿಂದ ನಿಷೇಧಿಸಲಾಗಿದೆ ಎಂದು ಈಸಿಜೆಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ಈಸಿಜೆಟ್ನ ಸಿಬ್ಬಂದಿಗೆ ಎಲ್ಲ ಸಂದರ್ಭಗಳನ್ನು ಮೌಲ್ಯಮಾಪನ ಮಾಡಲು, ವಿಮಾನ ಹಾಗೂ ಇತರ ಪ್ರಯಾಣಿಕರ ಸುರಕ್ಷತೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ತ್ವರಿತವಾಗಿ ಮತ್ತು ಸೂಕ್ತವಾಗಿ ಕಾರ್ಯನಿರ್ವಹಿಸಲು ತರಬೇತಿ ನೀಡಲಾಗಿದೆ” ಎಂದು ಈಸಿಜೆಟ್ ಹೇಳಿದೆ.
"I’m going to bomb the plane, death to America, death to Trump and Allah-hu-Akbar" passenger shouts on easyJet from London’s Luton Airport and en route to Glasgow Airport in Scotland.
— Deccan Chronicle (@DeccanChronicle) July 29, 2025
Abhay Devdas Nayak pretended to be a muslim and shouted the slogans. #easyjet #viralvideo… pic.twitter.com/tBIB70OzCR
