ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ವೀರಭದ್ರಯ್ಯ ಸ್ವಾಮಿ ಮಾತನಾಡಿ, “2010-11ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಏರ್ಪಡಿಸಿದ ಈ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ. ಹಳೆ ವಿದ್ಯಾರ್ಥಿಗಳು ತಮ್ಮ ಸಹಪಾಠಿ, ಗುರುಗಳೊಂದಿಗೆ ಹಳೆ ನೆನಪುಗಳನ್ನು ಮೆಲುಕು ಹಾಕುವ ಅಪರೂಪದ ಕ್ಷಣಕ್ಕೆ ಇದು ಸಾಕ್ಷಿಯಾಗಿದೆʼ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವೆಂಕೋಬಾ ಪಾಟೀಲ್ ಮಾತನಾಡಿ, “ರಸ್ತಾಪುರ ಗ್ರಾಮದ ಶಾಲೆಯಲ್ಲಿ ಇಂತಹ ವಿಶೇಷ ಕಾರ್ಯಕ್ರಮ ಇಲ್ಲಿಯವರೆಗೆ ನಡೆದಿರಲಿಲ್ಲ. ಇಂತಹ ಅಪರೂಪ ಕಾರ್ಯಕ್ರಮ ಸಮಾಜಕ್ಕೆ ಪ್ರೇರಣೆಯಾಗುತ್ತದೆ. ಆಡಂಬರ ಇಲ್ಲದೆ ಅತ್ಯಂತ ಸರಳವಾಗಿ ಆಯೋಜಿಸಿರುವ ಈ ಕಾರ್ಯಕ್ರಮ ವಿಶೇಷವಾಗಿದೆʼ ಎಂದರು.
ಪ್ರಾಸ್ತಾವಿಕವಾಗಿ ಮಲ್ಲಿಕಾರ್ಜುನ್ ಆರ್ಬೋಳ ಮಾತನಾಡಿದರು. ವಾಣಿಶ್ರೀ ದರ್ಬಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಇದನ್ನೂ ಓದಿ : ಯಾದಗಿರಿ | ಈಶ್ವರಚಂದ್ರ ವಿದ್ಯಾಸಾಗರ್ 134ನೇ ಸ್ಮರಣ ದಿನಾಚರಣೆ
ಕಾರ್ಯಕ್ರಮದಲ್ಲಿ ಪ್ರಮುಖರಾದ ಜೆಟ್ಟೆಪ್ಪ ಭಾವಿಮನಿ, ಏಕನಾಥ ನಾಯಕ, ಚಂದ್ರಶೇಖರ ವೈದ್ಯ ದೈಹಿಕ ಶಿಕ್ಷಣ, ನೇತ್ರಾವತಿ, ನಾಗರತ್ನ, ಬಸನಗೌಡ ಬೆಳ್ಳಿಕಟ್ಟಿ, ರಾಮಕೃಷ್ಣ ಕಟ್ಕಾವಲಿ, ಶ್ರೀಶೈಲ ಖೇಡಗಿ, ವೀರುಪಾಕ್ಷಯ್ಯ ಮಹಾಂತಯ್ಯ ಸಂಕಣ್ಣೂರ, ಮಲ್ಲಿಕಾರ್ಜುನ ಹುಗ್ಗಿ, ವೀಣಾಶ್ರೀ, ಗಿರಣ್ಣಗೌಡ, ಕಾಂತರಾಜ, ಬೂದೆಪ್ಪ ಉಳ್ಳಿ, ಸರೋಜಾ, ಪ್ರಭು, ವಿಶ್ವನಾಥ ಎಂ ಯರಗೋಳ, ಭೀಮಬಾಯಿ ಹೂಗಾರ, ಪಲ್ಲವಿ ಕಟ್ಟಿಮನಿ, ಮಾರುತಿ ಕುಲಕರ್ಣಿ, ರಾಜಪ್ಪ ದೇವಿಕೇರಿ, ಇರ್ಷದ ಅಹ್ಮದ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಾರುತಿ ಕುಲಕರ್ಣಿ ನಿರೂಪಿಸಿದರು. ನಾಗರಾಜ ತನಕೇದಾರ ಸ್ವಾಗತಿಸಿದರು. ಜಯಶ್ರೀ ಮಲ್ಲಣ್ಣ ವಂದಿಸಿದರು.