ಶಿವಮೊಗ್ಗ, ನಿಂತಿರುವ ಲಾರಿಗೆ ಖಾಸಗಿ ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವಾಗಿದ್ದು 15 ಜನರಿಗೆ ಗಾಯಗಳಾಗಿದೆ. ಇದರಲ್ಲಿ ಐದು ಜನ ಸೀರಿಯಸ್ ಆಗಿದ್ದಾರೆ.
ಗಾಜನೂರಿನ ಬಳಿ ನಿಂತಿದ್ದ ಲಾರಿಗೆ ಖಾಸಗಿ ಬಸ್ (ದುರ್ಗಾಂಬ) ಬಸ್ ಡಿಕ್ಕಿ ಆಗಿದೆ. ಎದುರಿನಿಂದ ವಾಹನ ಬಂದ ವಾಹನದ ಲೈಟ್ ರಿಫ್ಲೆಕ್ಷನ್ ಆದ ಕಾರಣ ಎಡಕ್ಕೆ ಬಸ್ ನ್ನ ಎಳೆದ ಪರಿಣಾಮ ಸೈಡ್ ನಲ್ಲಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದಿದೆ.
ಲಾರಿಗೆ ರಿಫ್ಲೆಕ್ಟರ್ ಇಲ್ಲದ ಕಾರಣ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಪ್ರಯಾಣಿಕರಾದ ಚಳ್ಳಕೆರೆಯ ನಿವಾಸಿ ಹರ್ಷಿತ್ (25). ಬಸ್ ನಿರ್ವಾಹಕ ಅಣ್ಣಪ್ಪ (35) ಎಂಬುವರು ಸಾವನ್ನಪ್ಪಿದ್ದಾರೆ.
ಅಣ್ಣಪ್ಪನವರು ಹೊಸನಗರ ತಾಲೂಕಿನ ನಿವಾಸಿ ಆಗಿದ್ದು ನಿರ್ವಾಹಕರಾಗಿ ಇತ್ತೀಚೆಗೆ ಸೇರಿಕೊಂಡಿದ್ದರು. ಚಾಲಕನಿಗೆ ತರಿಚಿದ ಗಾಯಗಳಾಗಿವೆ. ಸುಮಾರು 15 ಜನಿಗೆ ಗಾಯಗಳಾಗಿವೆ. ಗಂಭೀರವಾದವರಲ್ಲಿ ಮಂಜುನಾಥ್(45), ಪಾಲಮ್ಮ (60), ಪ್ರಸಾದ್ (43) ಸುಜಾತ(40), ಬಿಂದು (20) ಎಂದು ಗುರುತಿಸಲಾಗಿದೆ.
ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಘಟನೆ ಬೆಳಿಗ್ಗೆ ನಾಲ್ಕು ಗಂಟೆಗೆ ನಡೆದಿದೆ. ಬಸ್ಸು ಮಂಗಳೂರಿನಿಂದ ಶಿವಮೊಗ್ಗದ ಕಡೆ ಚಲಿಸುತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಗಾಯಾಳುಗಳನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.