ತುಮಕೂರು ನಗರದ, ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ವಿರುದ್ಧ ದಲಿತ ಮುಖಂಡರು ಅಸಮಧಾನ ವ್ಯಕ್ತಪಡಿಸಿದರು ಪರಿಶಿಷ್ಟ ಸಮುದಾಯದವರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ದೂರು ಸ್ವೀಕರಿಸಲು ವಿಳಂಭ ಮಾಡುತ್ತಾರೆ. ನೀಡಿದ ದೂರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಠಾಣೆ ಗಳಲ್ಲಿ ಕುಂದು ಕೊರತೆ ಸಭೆ ನಡೆಸುತ್ತಿಲ್ಲ, ಎಂದು ಪರಿಶಿಷ್ಟ ಸಮುದಾಯದ ಮುಖಂಡರು ಪೊಲೀಸ್ ಇಲಾಖೆ ಪರಿಶಿಷ್ಟ ಸಮುದಾಯದವರಿಗೆ ಯಾವ ರೀತಿ ಸ್ಪಂದಿಸುತ್ತಿದೆ ಎಂದು ಬಿಚ್ಚಿಟ್ಟರು.
ಸಭೆ ಆರಂಭದಲ್ಲಿ ಸಹಿ ಇಲ್ಲದ ಅನುಪಾಲನಾ ವರದಿ ಕಂಡ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನು ನಡಾವಳಿ ಎನ್ನಲು ಸಾಧ್ಯವೇ? ಇಂತಹ ಬೇಜವಾಬ್ದಾರಿ ಯಾಕೆ? ಎಂದು ಪ್ರಶ್ನಿಸಿದರು.1978ರಿಂದ ಸಭೆಗೆ ಬರುತ್ತಿದ್ದೇವೆ. ಇಂತಹ ನಿರ್ಲಕ್ಷ್ಯ ಆಗಿರಲಿಲ್ಲ. ನಾವು ಕೇಳಿದ್ದರಲ್ಲಿ ತಪ್ಪೇನಿದೆ? ಎಂಹೇಳಿದರು.ಗಲ್‌ನ ದಲಿತ್ ನಾರಾಯಣ್, ಪ್ರಶ್ನಿಸಿದರು. ಇದಕ್ಕೆ ಎಲ್ಲರೂ ದನಿಗೂಡಿಸಿದರು.
‘ಸಹಿ ಮಾಡಿಕೊಡುತ್ತೇನೆ. ನೀವು ಭಾಷಣ ಮಾಡಬೇಡಿ, ಸಭೆ ಯಾಕೆ ತಡೆಯುತ್ತೀರಿ ? ಸುಮ್ಮನೆ ಕುಳಿತುಕೊಳ್ಳಿ , ಇಲ್ಲದಿದ್ದರೆ ಎದ್ದು ಹೋಗಿ ಎಂದು ಎಸ್ ಪಿ ಅಶೋಕ್ ಕೆ ವಿ ಸಿಟ್ಟಾದರು. ಇದರಿಂದ ಮತ್ತಷ್ಟು ಸಿಡಿಮಿಡಿಗೊಂಡ ಮುಖಂಡರು ಸಭೆ ಬಹಿಷ್ಕರಿಸಲು ಮುಂದಾದರು. ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು ಪೊಲೀಸರು ಮುಖಂಡರನ್ನು ಸಮಾಧಾನಪಡಿಸಿ ಸಭೆ ನಡೆಯುವಂತೆ . ನೋಡಿಕೊಂಡರು.

ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಚೌಡನಕುಪ್ಪೆ, ಹಂಗರಹಳ್ಳಿ ಬಳಿ ಮಾದಿಗರು ಎಂಬ ಕಾರಣಕ್ಕೆ ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲ. ಸವರ್ಣೀಯರು ಪ್ರಭಾವಿಗಳಾಗಿದ್ದು, ಎರಡು ವರ್ಷದಿಂದ ಉಳಿಮೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವನಜಾದೇವಿ ಅವರು ಸಭೆಯ ಗಮನಕ್ಕೆ ತಂದರು
ಸರ್ಕಾರಿ ಗೋಮಾಳ ಆಕ್ರಮಿಸಿಕೊಂಡು ಕಂದಾಯ ಜಾಗ ಎನ್ನುತ್ತಿದ್ದಾರೆ. ಮೂರು ವರ್ಷಗಳಿಂದ ಠಾಣೆಗೆ ಅಲೆಯುತ್ತಿದ್ದೇನೆ. ಯಾವುದೇ ಪ್ರಯೋಜನ ವಾಗಿಲ್ಲ. 20 ಕುಟುಂಬಗಳಿಗೆ ತೊಂದರೆಯಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಕಳೆದ ವರ್ಷ ಹೊಲದಲ್ಲಿ ಬೆಳೆದಿದ್ದ ಬೆಳೆಯನ್ನು ಮನೆಗೆ ಸಾಗಿಸಲು ಆಗಲಿಲ್ಲ ಎಂದರು.
‘ಈ ಕುರಿತು ಇವತ್ತೇ ಪ್ರಕರಣ ದಾಖಲಿಸಲಾಗುವುದು. ರಸ್ತೆ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು. ಕಾನೂನು ಪ್ರಕಾರ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್
ಪ್ರತಿ ತಿಂಗಳು ಎರಡನೇ ಭಾನುವಾರ ಎಲ್ಲ ಠಾಣೆಗಳಲ್ಲಿ ಪರಿಶಿಷ್ಟ ಸಮುದಾಯದ ಕುಂದು ಕೊರತೆ ಸಭೆ ನಡೆಸಬೇಕು. ಆದರೆ ಯಾವುದೇ ಠಾಣೆಗಳಲ್ಲಿ ಸಕಾಲಕ್ಕೆ ಸಭೆಗಳು ನಡೆಯುತ್ತಿಲ್ಲ. ಕೆಲವು ಕಡೆಗಳಲ್ಲಿ ಸಭೆ ಕರೆದು, ಅವರಿಗೆ ಬೇಕಾದ ಐದಾರು ಜನರನ್ನು ಕೂರಿಸಿ ಫೋಟೋಗೆ ಪೋಸು ಕೊಡುತ್ತಾರೆ. ಪರಿಶಿಷ್ಟರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಆಗುತ್ತಿಲ್ಲ ಎಂದು ಮುಖಂಡರು ಕಿಡಿಕಾರಿದರು.

ಗುಬ್ಬಿ ಠಾಣೆಯಲ್ಲಿ ಮುಸ್ಲಿಂ ಮುಖಂಡರನ್ನು ಕರೆದು ಪರಿಶಿಷ್ಟರ ಸಭೆ ಮಾಡುತ್ತಾರೆ. ಇದು ಯಾವಾಗ ಸರಿದಾರಿಗೆ ಬರುತ್ತದೆ’ ಎಂದು ಗುಬ್ಬಿಯ ಸಂತೋಷ್ ಪ್ರಶ್ನಿಸಿದರು. ‘ದಂಡಿನಶಿವ-ರದಲ್ಲಿ 5 ತಿಂಗಳಿನಿಂದ ಸಭೆಯೇ ಆಗಿಲ್ಲ’ ಎಂದು ಮುಖಂಡ ಜಗದೀಶ್ ಹೇಳಿದರು. ‘ಬೆಳಿಗ್ಗೆ 10 ಗಂಟೆಗೆ ಸಭೆ ಕರೆಯುತ್ತಾರೆ. ಮಧ್ಯಾಹ್ನ ಗಂಟೆಯಾದರೂ ಇನ್‌ಸ್ಪೆಕ್ಟರ್ ಬರುವುದಿಲ್ಲ. ಸಂಜೆ 4 ಗಂಟೆಗೆ ಸಭೆ ನಡೆಸುತ್ತಾರೆ’ ಎಂದು ತುರುವೇಕೆರೆ ಮಹಾಲಿಂಗಯ್ಯ ವಾಸ್ತವ ಬಿಚ್ಚಿಟ್ಟರು.
‘ಯಾಕೆ ಸಭೆ ಕರೆದಿಲ್ಲ ಎಂದು ಪ್ರಶ್ನಿಸಿದರೆ, ಸಭೆ ಮಾಡಲೇಬೇಕು ಎಂಬ ಆದೇಶ ಎಲ್ಲಿದೆ ತೋರಿಸು ಎಂದು ಪಿಎಸ್‌ಐ ನಮಗೆ ಮರುಪ್ರಶ್ನೆ ಹಾಕುತ್ತಾರೆ. ದೂರು ಸಲ್ಲಿಸಲು ಹೋದರೆ ಮೂರು-ನಾಲ್ಕು ಸಲ ಅಲೆದಾಡಿಸುತ್ತಾರೆ’ ಎಂದು ಕಳ್ಳಂಬೆಳ್ಳದ ನಾಗೇಂದ್ರ ಹೇಳಿದರು. ‘ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಎರಡನೇ ಭಾನುವಾರ ಬೆಳಿಗ್ಗೆ 11 ಗಂಟೆಗೆ ಸಭೆ ನಡೆಸಲಾಗುವುದು’ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಭರವಸೆ ನೀಡಿದರು.

ತುಮಕೂರು ನಗರದಲ್ಲಿ ಹೊಸದಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಠಾಣೆ ಆರಂಭವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದರ ಮೇಲಿನ ದೌರ್ಜನ್ಯ ತಡೆಗೆ ಕ್ರಮವಹಿಸಲು, ತಪ್ಪಿತಸ್ಥರಿಗೆ ತ್ವರಿತವಾಗಿ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಪ್ರತ್ಯೇಕ ಠಾಣೆ ಪ್ರಾರಂಭಿಸಲಾಗಿದೆ.
ದೌರ್ಜನ್ಯಕ್ಕೆ ಒಳಗಾದವರು ನೇರವಾಗಿ ಠಾಣೆಗೆ ಬಂದು ದೂರು ನೀಡಬಹುದು. ಇತರೆ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳು ಸಹ ಡಿಸಿಆರ್‌ಇಗೆ ವರ್ಗಾಯಿಸ-ಲಾಗುತ್ತವೆ. ನಮ್ಮಲ್ಲಿ ಈವರೆಗೆ ಒಟ್ಟು 21 ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಆರ್‌ಇ ಡಿವೈಎಸ್ ಪಿ ಸಭೆಗೆ ಮಾಹಿತಿ ನೀಡಿದರು
ಹೆಚ್ಚುವರಿ ಪೊಲೀಸ್ ವರಿಷ್ಠಾ ಧಿಕಾರಿಗಳಾದ ಸಿ.ಗೋಪಾಲ್, ಪುರುಷೋತ್ತಮ್, ಡಿವೈಎಸ್‌ಪಿಗಳು ಸಭೆಯಲ್ಲಿ ಇದ್ದರು.