ಗುಬ್ಬಿ | ಜಯಸಿಂಹ ಆಸ್ಪತ್ರೆಯಿಂದ ಯಶಸ್ವಿ ಸೊಂಟ ಕೀಲು ಮರು ಜೋಡಣೆ ಶಸ್ತ್ರ ಚಿಕಿತ್ಸೆ

Date:

Advertisements

ನಾಲ್ಕು ವರ್ಷಗಳಿಂದ ಸೊಂಟ ಕೀಲು ಕೊಳೆತು ನಿತ್ಯ ಕರ್ಮ ಕೂಡಾ ಮಾಡಿಕೊಳ್ಳದ ಸ್ಥಿತಿಯಲ್ಲಿ ನಿರ್ಜೀವದಂತಾಗಿದ್ದ ಮಧ್ಯ ವಯಸ್ಸಿನ ಮಹಿಳೆಗೆ ಮರು ಜೀವನ ಕಲ್ಪಿಸಿದ ಗುಬ್ಬಿಯ ಜಯಸಿಂಹ ಆಸ್ಪತ್ರೆಯ ಖ್ಯಾತ ಮೂಳೆ ತಜ್ಞ ಡಾ.ಮುರಳೀಧರ್.ಬಿ.ಎಂ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ರಿಯಾಯತಿ ದರದಲ್ಲಿ ಬಡ ಮಹಿಳೆಗೆ ಬದುಕು ಕಟ್ಟಿಕೊಟ್ಟಿದ್ದು ಆರೋಗ್ಯ ಸೇವಾ ಕಾರ್ಯಕ್ಕೆ ಅರ್ಥ ಕಲ್ಪಿಸಿದ್ದಾರೆ.

ಸೊಂಟದ ಮೂಳೆ ಕೀಲು ಜಾಯಿಂಟ್ ಭಾಗದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ 48 ವರ್ಷ ವಯಸ್ಸಿನ ಮಲ್ಲಸಂದ್ರ ನಿವಾಸಿ ಕಮಲಮ್ಮ ಅವರು ಕಳೆದ ನಾಲ್ಕು ವರ್ಷಗಳಿಂದ ಸೊಂಟ ಬಿದ್ದು ಹೋಗಿರುವ ಸ್ಥಿತಿಯಲ್ಲಿದ್ದರು. ಮನೆಯಲ್ಲಿ ಯಾವ ಕೆಲಸ ಕಾರ್ಯ ಮಾಡಲಾಗದ ದುಸ್ಥಿತಿಯಲ್ಲಿ ಕುಟುಂಬಸ್ಥರ ಅವಲಂಬಿಸಿ ನಿತ್ಯ ಕರ್ಮ ಕೆಲಸ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಯಿತು. ಈ ಸಮಯದಲ್ಲಿ ಬೆಂಗಳೂರು, ತುಮಕೂರು ಹೀಗೆ ಅನೇಕ ಆಸ್ಪತ್ರೆ, ಖ್ಯಾತ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆಗೆ ಅಂಗಲಾಚಿದ್ದಾರೆ. ಎಲ್ಲೆಡೆ ದೊಡ್ಡ ಮಟ್ಟದ ಆಪರೇಶನ್ ಮಾಡಬೇಕಾಗುತ್ತೆ. ಸುಮಾರು ನಾಲ್ಕರಿಂದ ಐದು ಲಕ್ಷ ಹಣ ನೀಡಬೇಕು. ಆದರೂ ಯಶಸ್ವಿ ಬಗ್ಗೆ ಹೇಳಲಾಗದು ಎಂಬ ಮಾತುಗಳು ಕೇಳಿಬರುತ್ತವೆ.

ನಿರಾಸೆಯಲ್ಲಿದ್ದ ರೋಗಿ ಕಮಲಮ್ಮ ಅವರಿಗೆ ಗುಬ್ಬಿಯ ಜಯಸಿಂಹ ಆಸ್ಪತ್ರೆಯ ಡಾಕ್ಟರ್ ಮುರಳೀಧರ್ ಹೆಸರು ಕೆಲವರಿಂದ ಸಲಹೆ ಸಿಕ್ಕಿದೆ. ಕೂಡಲೇ ಜಯಸಿಂಹ ಆಸ್ಪತ್ರೆಯ ಕಡೆ ಬಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡ ಸಮಯದಲ್ಲಿ ವೈದ್ಯರ ಸೇವೆ ಮಾಡಲೇಬೇಕು ಎಂದು ನಿರ್ಧರಿಸಿ ರೋಗಿಯ ಎಲ್ಲಾ ರೀತಿಯ ಪರೀಕ್ಷೆಗೆ ಒಳಪಡಿಸಿ ಶಸ್ತ್ರ ಚಿಕಿತ್ಸೆ ಮಾಡಬೇಕಿದೆ. ಸೊಂಟದ ಮೂಳೆ ಕೀಲು ಬದಲಾವಣೆ ಮಾಡಬೇಕ್ ಎಂದು ಚಾಲೆಂಜ್ ಆಪರೇಶನ್ ಮಾಡಲು ಸಜ್ಜಾದರು. ಶಸ್ತ್ರ ಚಿಕಿತ್ಸೆಗೆ ತಗಲುವ ವೆಚ್ಚದ ಬಗ್ಗೆ ರೋಗಿಗೆ ಏನನ್ನೂ ತಿಳಿಸದೆ. ಕಮಲಮ್ಮ ಅವರನ್ನು ಒಳರೋಗಿಯಾಗಿ ದಾಖಲು ಮಾಡಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಅದಕ್ಕೂ ಮೊದಲು ಆಕೆಯ ದೇಹದ ಪರಿಸ್ಥಿತಿ ಹೇಳತೀರದಾಗಿತ್ತು. ಎಲ್ಲಾ ರೀತಿಯ ಚಿಕಿತ್ಸೆ ನಡೆಸಿ ಶಸ್ತ್ರ ಚಿಕಿತ್ಸೆಗೆ ಸಿದ್ಧಪಡಿಸಿದರು. ಸತತ ನಾಲ್ಕು ತಿಂಗಳು ಆಕೆಯ ಉಪಚರಿಸಿದ ಜಯಸಿಂಹ ಆಸ್ಪತ್ರೆಯ ವೈದ್ಯ ತಂಡಕ್ಕೆ ಮೊದಲ ಬಾರಿ ಯಶಸ್ವಿ ಶಸ್ತ್ರ ಚಿಕಿತ್ಸೆ ತಾಲ್ಲೂಕಿನಲ್ಲಿ ಮನೆ ಮಾತಾಗಿದೆ.

Advertisements

ಜಯಸಿಂಹ ಆಸ್ಪತ್ರೆಯ ಮುಖ್ಯಸ್ಥ, ಮೂಳೆ ತಜ್ಞ ಡಾ.ಮುರಳೀಧರ್ ಮಾತನಾಡಿ ನಾಲ್ಕು ವರ್ಷ ಹಾಸಿಗೆ ಹಿಡಿದ ಕಮಲಮ್ಮ ಬದುಕು ಮುಗಿಯಿತು ಎಂದೇ ನಮ್ಮಲ್ಲಿಗೆ ಬಂದಾಗ ಆಕೆಯ ಪರಿಸ್ಥಿತಿ ಮನಕಲುಕಿತು. ದೊಡ್ಡ ನಗರ ದೊಡ್ಡ ಆಸ್ಪತ್ರೆಯಲ್ಲಿ ಪ್ರಯತ್ನ ಪಟ್ಟರೂ ಸರಿ ಹೋಗಿಲ್ಲ ಎಂಬ ಹತಾಶೆ ಆಕೆಯನ್ನು ಮತ್ತಷ್ಟು ಕುಗ್ಗಿಸಿದೆ. ಆರ್ಥಿಕವಾಗಿ ಸಹ ಸೋತು ನನ್ನಲ್ಲಿಗೆ ಬಂದ ಅವರನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ನಾಲ್ಕು ತಿಂಗಳ ಹಾರೈಕೆ ಮಾಡಿ ಇಂದು ನಡೆದು ಓಡಾಡುವ ಭರವಸೆ ಆಕೆಯ ಮುಖದಲ್ಲಿ ಎದ್ದು ಕಾಣುತ್ತಿದೆ. ಈ ಸಂತಸದ ಕ್ಷಣ ನನಗೂ ಸಾರ್ಥಕ ಸೇವೆ ಎನಿಸಿದೆ ಎಂದು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.

ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಕಮಲಮ್ಮ ತನ್ನ ಸಂತಸ ಹಂಚಿಕೊಂಡು ವೈದ್ಯೋ ನಾರಾಯಣೋ ಹರಿ ಎಂಬ ಮಾತು ಅಕ್ಷರಶಃ ಸತ್ಯ. ನಾಲ್ಕು ವರ್ಷ ಹಾಸಿಗೆ ಹಿಡಿದ ನಾನು ಕಂಡಿದ್ದು ನರಕ ದರ್ಶನ. ಎಲ್ಲಾ ದೊಡ್ಡ ಆಸ್ಪತ್ರೆ ಭೇಟಿ ಮಾಡಿದ್ದರೂ ಎಲ್ಲಿಯೂ ಶಸ್ತ್ರ ಚಿಕಿತ್ಸೆ ಯಶಸ್ವಿ ಬಗ್ಗೆ ಭರವಸೆ ನೀಡಿರಲಿಲ್ಲ. ಗುಬ್ಬಿಯ ಜಯಸಿಂಹ ಆಸ್ಪತ್ರೆಯ ಬಗ್ಗೆ ತಿಳಿದು ಬಂದ ನನಗೆ ಡಾಕ್ಟರ್ ಮುರಳೀಧರ್ ಪರೀಕ್ಷೆಗೆ ಒಳಪಡಿಸಿ ಯಶಸ್ವಿ ಚಿಕಿತ್ಸೆ ಮಾಡುವ ಭರವಸೆ ನೀಡಿದ್ದರು. ಹೇಳಿದಂತೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ರಿಯಾಯತಿ ದರದಲ್ಲಿ ನಡೆಸಿಕೊಟ್ಟ ನನಗೆ ಮರು ಜೀವನ ಕಲ್ಪಿಸಿದರು ಎಂದು ಆಸ್ಪತ್ರೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ಕಾರ್ಯದಲ್ಲಿ ಡಾ.ಆಶಾ.ಆರ್., ಡಾ.ಹರಿಪ್ರಿಯಾ, ಸಿಬ್ಬಂದಿಗಳಾದ ಲೀಲಾವತಿ, ಕಾವ್ಯ, ನವೀನ್, ಬೃಂದಾ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X