“ಸಾಂಸ್ಕೃತಿಕ ಕಾರ್ಯಕ್ರಮಗಳು ಭಜನೆ ಪುರಾಣ ಕೀರ್ತನೆಗಳು ಜನರ ಬದುಕನ್ನು ತಿದ್ದಿ ಸಂಸ್ಕಾರವಂತರನ್ನಾಗಿಸುವ ಹಾಗೂ ಸಮಾಜವನ್ನು ನಿಯಂತ್ರಿಸುವ ಶಕ್ತಿಯಾಗಿವೆ” ಶಾಸಕ ಪ್ರಕಾಶ ಕೋಳಿವಾಡ ಅವರು ಹೇಳಿದರು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲ್ಲೂಕಿನ ಕುಪ್ಪೇಲೂರು ಗ್ರಾಮದಲ್ಲಿ ಮಾತೋಶ್ರೀಮಹದೇವಕ್ಕ ಮಂಗಳವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ ಯವರು ನಾಗರ ಪಂಚಮಿ ಹಬ್ಬದ ಅಂಗವಾಗಿ ಹಾಗೂ ಆಂಜನೇಯ ಸ್ವಾಮಿ ಭಜನಾ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
“ಗ್ರಾಮೀಣ ಪರಿಸರದಲ್ಲಿ ಸಾಂಸ್ಕೃತಿಕ ವಾತಾವರಣ ಸೃಷ್ಟಿಯಾದರೆ ಮಾನಸಿಕ ಶಾಂತಿಯು ಸಾಮಾಜಿಕ ಕ್ಷೇಮವೂ ಸುಭದ್ರವಾಗಿರುತ್ತದೆ” ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಕುಪ್ಪೇಲೂರಿನ ಸಿದ್ದಾರೂಡ ಮಠದ ಪೂಜ್ಯ ಶ್ರೀ ಪ್ರಿಯಾನಂದ ಮಹಾಸ್ವಾಮಿಗಳು ಮಾತನಾಡಿ, “ಸಜ್ಜನರ ಸಂಗದಿಂದ ಸಂಸ್ಕಾರ ಸಂಸ್ಕೃತಿ ಬೆಳೆಯುತ್ತದೆ. ಸತ್ ಚಿಂತನೆ ಸದ್ವಿಚಾರವಂತ ಸುಸಂಸ್ಕೃತ ವ್ಯಕ್ತಿತ್ವದಿಂದ ಆರೋಗ್ಯಪೂರ್ಣ ಯೋಗ್ಯ ಸಮಾಜ ನಿರ್ಮಾಣ ಸಾಧ್ಯ ಎಂದು” ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕುಪ್ಪೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರೇಖಾ ದಾಸಪ್ಪ ಮಾದೇನಹಳ್ಳಿ ವಹಿಸಿದ್ದರು. ಮುಖ್ಯ ಅತಿಥಿಗಳ ಛಲವಾದಿ ಮಹಾಸಭಾ ಜಿಲ್ಲಾ ಅಧ್ಯಕ್ಷ ಮಲ್ಲೇಶ್ವಪ್ಪ ಮದ್ಲೇರ, ಗ್ರಾ ಪಂ ಉಪಾಧ್ಯಕ್ಷ ರಾಮಪ್ಪ ಸಿರಿಗೆರೆ, ಗದಿಗೆಪ್ಪ ಬಿರಣ್ಣನವರ, ಸುರೇಶ ಬಾನುವಳ್ಳಿ, ಬಸಪ್ಪ ಆಡಿನವರ, ಮಾಲತೇಶ ಮಣಕೂರ, ಮಾಲತೇಶ ನ್ಯಾಮತಿ, ದೇವೇಂದ್ರಪ್ಪ ಕೊಲೇರ, ರಾಮನಗೌಡ ಸಂಕನಗೌಡ್ರ,ಪಾಲಾಕ್ಷಪ್ಪ ಕಡೆಮನಿ, ಹನುಮಂತಪ್ಪ ಬತ್ತೆರ, ಹನುಮಂತಪ್ಪ ಸಂಕಣ್ಣನವರ, ಮೃತುಂಜಯ ಮರಡೂರ, ವೆಂಕಟೇಶ ಮಾಳನಾಯಕನ, ಹಳ್ಳಿ ಮಾತೋಶ್ರೀಮಹದೇವಕ್ಕ ಮಂಗಳವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ ಅಧ್ಯಕ್ಷ ಬಸವರಾಜ ಸಾವಕ್ಕನವರ, ಕಾರ್ಯದರ್ಶಿ ಗೌತಮ್ ಸಾವಕ್ಕನವರ, ಹಾಗೂ ಆಂಜನೇಯಸ್ವಾಮಿ ಭಜನಾ ಸಂಘದ ಪದಾಧಿಕಾರಿಗಳು, ಕುಮದ್ವತಿ ಸಾಂಸ್ಕೃತಿಕ ಕಲಾ ಸಂಘ ಕುಪ್ಪೇಲೂರು ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹದಿನೈದು ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.