ನಟಿ ಖುಷ್ಬೂ ಸುಂದರ್ ಅವರನ್ನು ತಮಿಳುನಾಡು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ನೈನಾರ್ ನಾಗೇಂದ್ರನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆದ ಮೊದಲ ಪುನರ್ರಚನೆಯಲ್ಲಿ ಖುಷ್ಬು ಅವರಿಗೆ ಮಹತ್ವದ ಹುದ್ದೆಯನ್ನು ನೀಡಲಾಗಿದೆ.
ರಾಜ್ಯ ಬಿಜೆಪಿ ಹಿರಿಯ ನಾಯಕರಾದ ವಿ ಪಿ ದುರೈಸಾಮಿ, ಕರು ನಾಗರಾಜನ್, ಕೆ ಪಿ ರಾಮಲಿಂಗಂ, ಶಶಿಕಲಾ ಪುಷ್ಪ, ಆರ್ ಸಿ ಪಾಲ್ ಕನಕರಾಜ್ ಮತ್ತು ಇತರ 14 ಜನರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಕರಾಟೆ ತ್ಯಾಗರಾಜನ್ ಮತ್ತು ಅಮರ್ ಪ್ರಸಾದ್ ರೆಡ್ಡಿ ಮತ್ತು ಇತರ 15 ಜನರನ್ನು ಪಕ್ಷದ ಕಾರ್ಯದರ್ಶಿಗಳಾಗಿ ನೇಮಿಸಲಾಯಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಾನವೀಯತೆಯ ಪಸೆ ಉಳಿದಿದೆಯೇ ತುಸುವಾದರೂ?
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿರುವ ಖುಷ್ಬೂ ಇತ್ತೀಚೆಗೆ ಪಕ್ಷದ ಕಾರ್ಯಕ್ರಮಗಳಿಂದ ದೂರವಿದ್ದರು. ಅವರು ರಾಜಕೀಯದಲ್ಲಿ ಸಕ್ರಿಯರಾಗಿ ಮುಂದುವರಿಯುತ್ತಾರೆಯೇ ಎಂಬ ಪ್ರಶ್ನೆಗಳ ಮಧ್ಯೆ ಹೊಸ ನೇಮಕಾತಿ ಬಂದಿದೆ. ಡಿಎಂಕೆ ಮೂಲಕ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಖುಷ್ಬೂ, ನಂತರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. 2020 ರಲ್ಲಿ ಬಿಜೆಪಿ ಸೇರಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು.
ರಾಜ್ಯ ಘಟಕದ ಉಪಾಧ್ಯಕ್ಷರಾಗಿ ನೇಮಕ ಮಾಡಿರುವುದಕ್ಕೆ ಖುಷ್ಬೂ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
I also would like to thank our respected National President @JPNadda ji for trusting me and giving me the responsibility. Your words of encouragement and support mean the world to me. 🙏🙏🙏 pic.twitter.com/C4XzP32JZu
— KhushbuSundar (@khushsundar) July 30, 2025
