ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಎಮ್ಮೆದೊಡ್ಡಿ ಗ್ರಾಮದ ಮದಗದ ಕೆರೆ ಬಳಿ ಗುರುವಾರ ನಡೆದಿದೆ.
ಹೊಸ ಸಿದ್ದರಹಳ್ಳಿಯ ಮಂಜಪ್ಪ (56) ಮತ್ತು ಹಳೇ ಸಿದ್ದರಹಳ್ಳಿಯ ಮೂರ್ತಪ್ಪ (55) ಗಾಯಗೊಂಡವರು. ಮನೆಯಿಂದ ಸಖರಾಯಪಟ್ಟಣ ಪಟ್ಟಣಕ್ಕೆ ಬರುವಾಗ ಮಾರ್ಗ ಮಧ್ಯೆ ಚಿರತೆಯೊಂದು ಇಬ್ಬರ ಮೇಲೆ ದಾಳಿ ಮಾಡಿದೆ. ಈ ಪರಿಣಾಮ ಮೂರ್ತಣ್ಣ ಎಂಬುವರ ಎಡಗೈನ ಒಂದು ಬೆರಳು ಚಿರತೆ ತಿಂದಿದೆ. ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಬೆಂಕಿ ಹಚ್ಚಿ ತಾಯಿಯನ್ನೇ ಹತ್ಯೆಗೈದ ಮಗ
ಈ ಘಟನೆಯಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣದಲ್ಲಿದ್ದಾರೆ. ಚಿರತೆ ದಾಳಿಗೆ ಭಯ ಪಟ್ಟು ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ.