ಜೀವರ್ಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬಿದ್ದಿರುವ ತಗ್ಗು, ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕದ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಗಾಯ್ ಶಾಲೆಯ ಮುಂದಿನ ರಸ್ತೆ, ಎಚ್‌ಡಿಎಫ್‌ಸಿ ಬ್ಯಾಂಕ್ ಎದುರುಗಡೆ ಹಾಗೂ ಅಂಬೇಡ್ಕರ್ ಪ್ರತಿಮೆ ಸೇರಿದಂತೆ ಮುಖ್ಯ ರಸ್ತೆಯ ನಾನಾ ಕಡೆ ತಗ್ಗು, ಗುಂಡಿ ಬಿದ್ದಿದ್ದು ವಾಹನ ಸವಾರರು ಓಡಾಡಲು ಪರದಾಡುವಂತಾಗಿದೆ. ಕೂಡಲೇ ರಸ್ತೆ ಗುಂಡಿ ಮುಚ್ಚಬೇಕೆಂದು ಒತ್ತಾಯಿಸಿದರು.
ತಗ್ಗು, ಗುಂಡಿಗಳಿಂದ ಹೆಚ್ಚಿನ ಅಪಘಾತಗಳಾಗುವ ಸಾಧ್ಯತೆಯಿದೆ. ಏನಾದರೂ ಅನಾಹುತ ಜರುಗಿದರೆ ಅದಕ್ಕೆ ಇಲಾಖೆಯೇ ನೇರ ಹೊಣೆಯಾಗುತ್ತದೆ. ನಿರ್ಲಕ್ಷಿಸದೆ ಕೂಡಲೇ ರಸ್ತೆ ದುರಸ್ತಿ ಮಾಡಬೇಕು. ಇಲ್ಲದಿದ್ದರೆ ಇಲಾಖೆ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದುʼ ಎಂದರು.
ಇದನ್ನೂ ಓದಿ : ಬೀದರ್ | ಜನರ ಸಮಸ್ಯೆಗಳಿಗೆ ಧ್ವನಿಯಾದ ಪತ್ರಿಕೆಗಳು : ಡಾ.ಭೀಮಾಶಂಕರ ಬಿರಾದಾರ
ಸಂಘಟನೆಯ ಭೀಮಶಂಕರ್ ಎಮ್. ಬಿಲ್ಲಾಡ, ನಾಟೀಕರ್, ವೀರೇಶ ನಾಯಕ, ಮಹಾಂತೇಶ ಹಾದಿಮನಿ, ಪರಮೇಶ್ವರ ನಾಯಕ ಬಿರಾಳ, ಆನಂದ ಗಾಜರೆ, ಆಕಾಶ ಬಿಲ್ಲಾಡ ಮತ್ತಿತರರು ಇದ್ದರು.