ಕೇಂದ್ರ ಸರ್ಕಾರದ ಅಧೀನದಲ್ಲಿರುವ, ಉಡುಪಿಯ ಮಲ್ಪೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಉಡುಪಿ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್’ (UCSL) ಕಂಪನಿಯಲ್ಲಿ ಶಾಶ್ವತ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಮಲ್ಪೆಯ ಯುಸಿಎಸ್‌ಎಲ್‌ನಲ್ಲಿ ಖಾಲಿ ಇರುವ 2 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.
1. ವ್ಯವಸ್ಥಾಪಕ (ಯೋಜನೆ ಮತ್ತು ವ್ಯವಹಾರ ಅಭಿವೃದ್ಧಿ) – 1 ಹುದ್ದೆ,
2. ಉಪ ವ್ಯವಸ್ಥಾಪಕ (ಇಲೆಕ್ಟ್ರಿಕಲ್ ಡಿಸೈನ್) – 1 ಹುದ್ದೆ ಖಾಲಿ ಇದ್ದು ಅರ್ಹರು ಅರ್ಜಿ ಸಲ್ಲಿಸಬಹುದು.
ವ್ಯವಸ್ಥಾಪಕ ಹುದ್ದೆಯು ಸಾಮಾನ್ಯ ವರ್ಗಕ್ಕೆ ನೀಡಲಾಗಿದ್ದು, ಯಾರು ಬೇಕಿದ್ದರೂ ಅರ್ಜಿ ಸಲ್ಲಿಸಬಹುದು, ಉಪ ವ್ಯವಸ್ಥಾಪಕ ಹುದ್ದೆಯನ್ನು OBC ವರ್ಗಕ್ಕೆ ಮೀಸಲಾತಿ ನೀಡಲಾಗಿದ್ದು, ಒಬಿಸಿ ಸಮುದಾಯದವರು ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಜಿ ಸಲ್ಲಿಸಲು ಆಗಸ್ಟ್ 14 ಕಡೆಯ ದಿನವಾಗಿದೆ. https://udupicsl.com ಅಥವಾ www.cochinshipyard.inನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ವಿದ್ಯಾರ್ಹತೆ: ವ್ಯವಸ್ಥಾಪಕ ಹೆದ್ದೆಗೆ; ಮೆಕಾನಿಕಲ್, ಎಲೆಕ್ಟ್ರಿಕಲ್, ನಾವಲ್ ಆರ್ಕಿಟೆಕ್ಚರ್ ಅಥವಾ ಮೆರೈನ್ ಇಂಜಿನಿಯರಿಂಗ್‌ನಲ್ಲಿ ಕನಿಷ್ಟ 60% ಅಂಕಗಳೊಂದಿಗೆ ಪದವಿ.
ಉಪ ವ್ಯವಸ್ಥಾಪಕಗೆ; ಎಲೆಕ್ಟ್ರಿಕಲ್, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಅಥವಾ ಎಲೆಕ್ಟ್ರಿಕಲ್ & ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪದವಿ.
ಅನುಭವ: ವ್ಯವಸ್ಥಾಪಕ: 9 ವರ್ಷಗಳ ಅನುಭವ, ಮತ್ತು ಉಪ ವ್ಯವಸ್ಥಾಪಕ: 7 ವರ್ಷಗಳ ಅನುಭವ
ಎರಡೂ ಹುದ್ದೆಗಳಿಗೆ ಕಡ್ಡಾಯವಾಗಿ ಶಿಪ್ ಬಿಲ್ಡಿಂಗ್, ಶಿಪ್ ರಿಪೇರ್, ಮೆರೈನ್ ಅಥವಾ ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಅನುಭವ ಹೊಂದಿರಬೇಕು.
ವಯೋಮಿತಿ: ವ್ಯವಸ್ಥಾಪಕ: ಗರಿಷ್ಠ 40 ವರ್ಷ, ಉಪ ವ್ಯವಸ್ಥಾಪಕ: ಗರಿಷ್ಠ 35 ವರ್ಷ
ವಯೋಮಿತಿ ಸಡಿಲಿಕೆ: OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಮಾಜಿ ಸೈನಿಕರಿಗೆ ಗರಿಷ್ಠ 10 ವರ್ಷ
ಅರ್ಜಿ ಶುಲ್ಕ: ಸಾಮಾನ್ಯ/OBC ಅಭ್ಯರ್ಥಿಗಳಿಗೆ ₹1000 (ಅಪರಿಹಾರ್ಯ), SC/ST ಅಭ್ಯರ್ಥಿಗಳಿಗೆ ಶುಲ್ಕವಿಲ್ಲ
ಆಯ್ಕೆ ವಿಧಾನ: ಅರ್ಹ ಅಭ್ಯರ್ಥಿಗಳಿಗೆ PowerPoint Presentation (30 ಅಂಕ), ಕೆಲಸದ ಅನುಭವ (40 ಅಂಕ), ಗುಂಪು ಚರ್ಚೆ (10 ಅಂಕ), ಮತ್ತು ಸಂದರ್ಶನ (20 ಅಂಕ) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.