ಚಿಕ್ಕಮಗಳೂರು ಜಿಲ್ಲೆಯಲ್ಲಿ ಅದೆಷ್ಟೋ ಪ್ರವಾಸಿತಾಣಗಳು ಇವೆ. ಅದನ್ನ ನೋಡಲು ಎಲ್ಲೆಲ್ಲಿಂದಲೂ ಪ್ರವಾಸಿಗರು ಬರುತ್ತಾರೆ. ನೋಡಲು ಎಷ್ಟು ಚಂದ ಅಷ್ಟೇ ಮೂಲಭೂತ ಸೌಕರ್ಯವಿಲ್ಲದೆ ಜನರು ವಂಚಿತರಗಿದ್ದಾರೆ. ಅದೇ ರೀತಿಯಲ್ಲಿ ಚಿಕ್ಕಮಗಳೂರು ನಗರದ ಹೃದಯಭಾಗ ಎಂದು ಕರೆಯುವ ಉಪ್ಪಳ್ಳಿ, ಈ ಉಪ್ಪಳ್ಳಿ ಭಾಗದ ವಾರ್ಡ್ ನಂಬರ್ 17ರಲ್ಲಿ ಸುಮಾರು 1700ಕ್ಕಿಂತ ಹೆಚ್ಚು ಮತದಾನ ಮಾಡುವ ಮತದಾರರು ಇದ್ದಾರೆ. ಆದರೇ, ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಇಲ್ಲಿ ವಾಸ ಮಾಡುತ್ತಿರುವವರು ಮುಸ್ಲಿಂ ಸಮುದಾಯ ಹಾಗೆಯೇ, ಉಳಿದ ಸಮುದಾಯದವರಿದ್ದಾರೆ. ಇಲ್ಲಿವರೆಗೂ ಡಾಂಬರ್ ಕಾಣದೆ ರಸ್ತೆ, ದಾರಿ ದೀಪ, ಹೇಳೋಕೆ ಮಾತ್ರ ನೀರಿನ ವ್ಯವಸ್ಥೆ ಎಂದು ಹೇಳುತ್ತಾರೆ. ಆದರೇ, ಈ ವ್ಯಾಪ್ತಿಗೆ ನೀರು ಪೂರೈಕೆ ಇಲ್ಲ ಹಾಗೆಯೇ, ಚರಂಡಿ ಅನ್ನೋದೇ ಕಂಡಿಲ್ಲವಾಗಿದೆ.

ವಾರ್ಡ್ ನಂಬರ್ 17ರಲ್ಲಿ ಡಾಂಬರ್ ಇಲ್ಲದೆ ರಸ್ತೆಯಲ್ಲ ಗೊಚ್ಚೆ ಆಗಿದೆ. ಇಲ್ಲಿಯವರೆಗೂ ನಮ್ಮ ವ್ಯಾಪ್ತಿಯಲ್ಲಿ ಇಲ್ಲಿವರೆಗೂ ಮೂಲಭೂತ ಸೌಕರ್ಯದಿಂದ ಇಲ್ಲಿ ವಾಸಿಸುತ್ತಿರುವ ಜನರು ವಂಚಿತರಗಿದ್ದಾರೆ. ಬೆಳಗ್ಗೆ ಕೆಲಸಕ್ಕೆ ಹೋಗಬೇಕಾದರೂ ಇದೇ ಮಾರ್ಗದಲ್ಲಿ ಹೋಗಬೇಕು. ಈ ರಸ್ತೆಯಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ, ಬದಲಿ ರಸ್ತೆ ಕೂಡ ಇಲ್ಲ ಪರದಾಡುವ ಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ನಿವಾಸಿ ರಝಕ್ ಈದಿನ.ಕಾಮ್ ಜೊತೆ ಮಾತಾಡಿದ್ದಾರೆ.

ಸಣ್ಣ ಪುಟ್ಟ ಮಕ್ಕಳು ಶಾಲೆಗೆ ಹೋಗಬೇಕು, ಅದರಲ್ಲೂ ಸರಿಯಾದ ಸಮಯಕ್ಕೆ ಹೋಗಬೇಕಾಗಿರೋದ್ರಿಂದ ಶಾಲಾ ಬಸ್ ಬರುವುದಿಲ್ಲ. ಹಾಗೆಯೇ, ಆಟೋದವರಿಗೆ ತಿಳಿಸಿದರು ಕೂಡ ” ಈ ರಸ್ತೆಯಲ್ಲಿ ಬಂದರೆ ಬಾಡಿಗೆ ಹಣಕ್ಕಿಂತ ಗಾಡಿಯ ರಿಪೇರಿಗೆ ಖರ್ಚು ಜಾಸ್ತಿ ಬರಲು ಆಗೋಲ್ಲ ಎಂದು ಹೇಳುತ್ತಾರೆ. ” ಒಂದು ಬಾಡಿಗೆ 300ರೂಪಾಯಿ ಕೇಳುತ್ತಾರೆ, ಹಣ ಕೊಟ್ಟರು ಬಾರದ ಆಟೋದವರು, ನಮ್ಮ ಪರಿಸ್ಥಿತಿ ಯಾರು ಕೇಳುತ್ತಾರೆ ಎಂದು ಮೌಸೀನ ಈದಿನ.ಕಾಮ್ ಜೊತೆ ಮಾತಾಡಿದರು.

ಕತ್ತಲೆಯ ವೇಳೆ ಈ ರಸ್ತೆಯಲ್ಲಿ ಬರಲು ಸಾಧ್ಯವಿಲ್ಲ, ನಮ್ಮ ಭಾಗಕ್ಕೆ ವಿದ್ಯುತ್ ಕಂಬವಿದ್ದರೂ ಬೀದಿ ದೀಪ ಅನ್ನೋದೇ ಇಲ್ಲದಾಗಿದೆ. ಅದರಲ್ಲೂ ಗುಂಡಿಗಳಿಂದ ರಸ್ತೆ ಕೂಡಿದ್ದು, ಪಕ್ಕದಲ್ಲಿರುವ ಸಣ್ಣ ಸಣ್ಣ ಗುಂಡಿಗಳು ಇವೆ. ಇದರಿಂದ ಅದೆಷ್ಟೋ ಜನರು ಬಿದ್ದು ಆಸ್ಪತ್ರೆ ಸೇರಿದ್ದಾರೆ. ಚರಂಡಿ ಇಲ್ಲದೆ ನೀರು ಮನೆಯೊಳಗೇ ನುಗ್ಗುತ್ತಿದೆ. ವಯಸ್ಸಾದ ವೃದ್ಧರನ್ನು ಅನಾರೋಗ್ಯ ಪೀಡಿತರಾದರೆ ಕರೆದುಕೊಂಡು ಹೋಗುವುದಕ್ಕೂ ಬಹಳ ಕಷ್ಟವಾಗಿದೆ. ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ. ಉಳಿದ ಸಮಯದಲ್ಲಿ ಯಾರೆಂದು ಕೇಳಲು ಸಹ ಬರುವುದಿಲ್ಲ ಎಂದು ಉಪ್ಪಳ್ಳಿ ಭಾಗದ ವಾರ್ಡ್ 17ರ ಸ್ಥಳೀಯ ನಿವಾಸಿಗಳು ಈದಿನ. ಕಾಮ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ನಾವು ಸರ್ಕಾರಕ್ಕೆ ಸುಂಕ ಕಟ್ಟಿದ್ದರು ಬಾರದ ಕಸದ ಗಾಡಿ ಇಲ್ಲಿ ವಿದ್ಯುತ್ ಕಂಬ ಹಾಕಿಸಲು ಪ್ರತಿಯೊಬ್ಬರು ಹಣ ಕಟ್ಟಿದ್ದೇವೆ. ಈ ಕುರಿತು ನಗರ ಸಭೆ ಸದಸ್ಯರಾದ ‘ಮುನೀರ್ ಅಹಮದ್ ಕಲ್ಲುದೊಡ್ಡಿ‘ ಅವರ ಬಳಿ ಕೇಳಿದರೆ ” ಕೆರೆಯ ಭಾಗದಲ್ಲಿರುವುದರಿಂದ ಏನು ಮಾಡಲು ಆಗೋಲ್ಲ ಹಣ ಬಿಡುಗಡೆ ಆಗಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಾರೆ.” ನಾವು ಮನೆ ಕಟ್ಟಿರುವುದು ಸರ್ಕಾರಕ್ಕೆ ಹಣ ಕೊಟ್ಟು, ಸರ್ಕಾರದಿಂದ ಕಟ್ಟಿಕೊಳ್ಳೋಕೆ ಒಪ್ಪಿಗೆ ಕೊಟ್ಟು ಈಗ ಅಭಿವೃದ್ಧಿ ಆಗೋಲ್ಲ ಅಂದ್ರೆ ಅದೆಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಅಭಿವೃದ್ಧಿಯಾಗಿದೆ ಎಂದು ಹೇಳುತ್ತಾರೆ. ಆದರೇ, “ಚಿಕ್ಕಮಗಳೂರು ನಗರವನ್ನು ಎರಡು ಭಾಗವಾಗಿ ವಿಂಗಡಿಸಿದ್ದಾರೆ. ಒಂದು ಭಾಗದಲ್ಲಿ ಕೋರ್ಟ್, ಆಸ್ಪತ್ರೆ, ಶಾಲಾ, ಹೈಟೆಕ್ ಕಾಲೇಜು, ಮೆಡಿಕಲ್ ಕಾಲೇಜು, ಜಿಲ್ಲಾ ಕಚೇರಿಗಳು ಹಾಗೂ ಇನ್ನಿತರ ಕಚೇರಿಗಳಿರುವ ಜಾಗದಲ್ಲಿ ಮಾತ್ರ ಅಭಿವೃದ್ಧಿ ಪಡಿಸಿದ್ದಾರೆ. ಇನ್ನ ಚಿಕ್ಕಮಗಳೂರಿನ ಅರ್ಧ ಭಾಗ ಅಭಿವೃದ್ಧಿ ನಶಿಸಿದೆ”. “ಎಲ್ಲಿ ಮೂಲಭೂತ ಸೌಕರ್ಯದಿಂದ ಜನರು ವಂಚಿತರಗಿದ್ದಾರೆ. ಆ ಭಾಗಕ್ಕೆ ಅಭಿವೃದ್ಧಿಯನ್ನು ಮಾಡಬೇಕಿದೆ. ಮತ ಹಾಕಿಸಿಕೊಳ್ಳಲು ಮಾತ್ರ ಚುನಾವಣೆ ಸಮಯದಲ್ಲಿ ಬರುತ್ತಾರೆ ಬಿಟ್ಟರೇ, ಇಲ್ಲಿ ಸತ್ತಿದಾರೋ ಬದುಕಿದರೋ ಎಂದು ಯಾರು ಬರಲ್ಲ”. ಈಗ ಆಡಳಿತ ಮಾಡುತ್ತಿರುವ ಸರ್ಕಾರದಿಂದ ಅಭಿವೃದ್ಧಿಗೆ ಬಂದಂತಹ ಕೋಟ್ಯಂತರ ಹಣ ಬಿಡುಗಡೆ ಆದರೂ ಅಧಿಕಾರಿಗಳು ಹಾಗೂ ಶಾಸಕರು ಅಭಿವೃದ್ದಿ ಮಾಡಲು ಮುಂದೆ ಬರುತ್ತಿಲ್ಲ ಎಂದು ನಿವಾಸಿ ಗೌಸ್ ಮುನೀರ್ ಈದಿನ.ಕಾಮ್ ಗೆ ತಿಳಿಸಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಆನೆ ದೊಡ್ಡಿ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಮನವಿ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ
ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಚಿಕ್ಕಮಗಳೂರು ಕ್ಷೇತ್ರದ ಶಾಸಕರು ಉಪ್ಪಳ್ಳಿ ಭಾಗದ ವಾರ್ಡ್ 17ರಲ್ಲಿ ಅಭಿವೃದ್ಧಿ ಪಡಿಸುವರೇ ಕಾದು ನೋಡಬೇಕಿದೆ.