ದೃಶ್ಯ, ಸಾಮಾಜಿಕ ಮಾಧ್ಯಗಳು ಅದಷ್ಟೇ ಸದ್ದು ಮಾಡಿದರೂ ಪತ್ರಿಕೆಗಳು ಜನರ ವಿಶ್ವಾಸ ಉಳಿಸಿಕೊಂಡು ಮಹತ್ವ ಕಾಪಾಡಿಕೊಂಡಿವೆ ಎಂದು ಕೆಪಿಸಿಸಿ ನೂತನ ಉಪಾಧ್ಯಕ್ಷೆ ರಾಜಶ್ರೀ ಸ್ವಾಮಿ ಅವರು ನುಡಿದರು.
ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಹಾಗೂ ವರದಿಗಾರರ ಸಂಘದ ಆಶ್ರಯದಲ್ಲಿ ನಗರದ ಬೀದರ ಸವಿತಾ ಭವನದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುದ್ರಣ ಮಾಧ್ಯಮದ ಮೇಲೆ ಜನರು ಹೆಚ್ಚು ನಂಬಿಕೆ, ವಿಶ್ವಾಸವಿದೆ. ಪತ್ರಿಕೆಗಳು ದೀರ್ಘಕಾಲ ದಸ್ತಾವೇಜು ರೀತಿಯಲ್ಲಿ ಶಾಶ್ವತ ದಾಖಲೆಯಾಗಿ ಉಳಿಯುತ್ತವೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ʼಸಮೃದ್ಧಿಯ ನೆಲೆʼ ಎಂಬ ನೂತನ ಪತ್ರಿಕೆ ಹಾಗೂ ವೆಬ್‌ಸೈಟ್ ಲೋಕಾರ್ಪಣೆ ನೆರೆವೇರಿತು.
ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಮಾಳಪ್ಪ ಅಡಸಾರೆ, ಜನವಾದಿ ಮಹಿಳಾ ಸಂಘಟನೆಯ ಲೀಲಾ ಸಂಗ್ರಾಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸಂಘದ ಅಧ್ಯಕ್ಷರೂ ಆದ ಹಿರಿಯ ಪತ್ರಕರ್ತರಾದ ಗಂಧರ್ವ ಸೇನಾ ಅಧ್ಯಕ್ಷತೆ ವಹಿಸಿದರು. ಸಮೃದ್ಧಿಯ ನೆಲೆ ಸಂಪಾದಕಿ ಕೀರ್ತಿ ಸೇನಾ
ಪತ್ರಕರ್ತರಾದ ಶೈಲೆಂದ್ರ ಕಾವಡಿ ಹುಮನಾಬಾದ, ಸಂತೋಷ ಹಡಪದ ಭಾಲ್ಕಿ, ರಾಜಶೇಖರ ಪಾಟೀಲ, ಮಹ್ಮದ್ ಯೂಸುಫ್ ರಹಮ್ ಬಿದ್ರಿ, ನಾಗಶೆಟ್ಟಿ ಧರಂಪುರ, ರವಿಂದ್ರ ಕಾಂಬಳೆ, ಭೀಮರಾವ ಬೀದರಕರ, ಸಂಧ್ಯಾರಾಣಿ, ಸುಶ್ಮೀತಾ ಮೋರೆ, ಪತ್ರಿಕಾ ವಿತರಕರಾದ ಸದಾನಂದ ಹಮೀಲಪುರೆ, ರಾಮಚಂದ್ರ ಕೊಂಡಾ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ : ಬೀದರ್ | ಒಳಮೀಸಲಾತಿ ಜಾರಿ ವಿಳಂಬ : ಮಾದಿಗ ಸಂಘಟನೆಗಳಿಂದ ಅರೆಬೆತ್ತಲೆ ಮೆರವಣಿಗೆ