ಆಸ್ತಿಗಾಗಿ ಸ್ವಂತ ಅಕ್ಕನನ್ನು ಕೊಂದ ತಮ್ಮನಿಗೆ ಬಳ್ಳಾರಿ ಜಿಲ್ಲಾ 2ನೇ ಸೆಷನ್ಸ್ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರು ಕಠಿಣ ಜೀವಾವಧಿ ಶಿಕ್ಷೆ ಮತ್ತು ₹25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ನೀಡಲು ವಿಫಲವಾದರೆ, 1 ವರ್ಷ ಸಾದಾ ಶಿಕ್ಷೆ ವಿಧಿಸಬೇಕು ಎಂದು ಕೋರ್ಟ್ ಹೇಳಿದೆ.
ವೇಣುಗೋಪಾಲ್ ಕೆ.ಜೆ ಶಿಕ್ಷೆಗೊಳಗಾದವರು. ಜತೆಗೆ ಮೃತ ಸುನಂದಾ ಪೂಜಾರ್ ಪುತ್ರ ಅಖಿಲ್ ಪೂಜಾರ್‌ಗೆ ₹50 ಸಾವಿರ ಪರಿಹಾರ ನೀಡಬೇಕು. ಇಲ್ಲವಾದರೆ ಆಸ್ತಿಯಿಂದ ಈ ಹಣವನ್ನು ಹೊಂದಿಸಿಕೊಡಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಗಂಡನನ್ನು ಬಿಟ್ಟು ಬಂದಿದ್ದ ಅಕ್ಕ ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆಯಲ್ಲಿ ವೇಣುಗೋಪಾಲ ಅವರ ಮನೆಯಲ್ಲಿಯೇ ನೆಲಿಸಿದ್ದರು. ಅಕ್ಕ ಸುನಂದಾ ತಮ್ಮನ ಆಸ್ತಿಯಲ್ಲಿ ಭಾಗ ಕೇಳಿದ್ದಳು. ಇದರಿಂದ ಪಾರಾಗಲು ಬಯಸಿದ್ದ ವೇಣುಗೋಪಾಲ 2017ರ ನ.3ರಂದು ತನ್ನ ಅಕ್ಕನ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದ. ತಲೆಗೆ ತೀವ್ರ ಪೆಟ್ಟಾಗಿದ್ದ ಸುನಂದಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಇದನ್ನೂ ಓದಿ : ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ : ಸಮಗ್ರ ತನಿಖೆಗೆ ಚಿಂತಕರ ಆಗ್ರಹ
ಪ್ರಕರಣದಲ್ಲಿ 16 ಸಾಕ್ಷಿದಾರರನ್ನು ವಿಚಾರಣೆ ಆಡಲಾಗಿದೆ. ಸರ್ಕಾರದ ಪರವಾಗಿ ಲಕ್ಷ್ಮೀ ದೇವಿ ಪಾಟೀಲ ವಾದಿಸಿದ್ದರು