ಜನಪ್ರಿಯ ತಮಿಳು ಚಲನಚಿತ್ರ ನಟ ಮದನ್ ಬಾಬ್ ನಿಧನರಾಗಿದ್ದಾರೆ. 71 ವರ್ಷದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಶನಿವಾರ ಸಂಜೆಯ ವೇಳೆಗೆ ಅವರ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.
ಮದನ್ ಬಾಬ್ ಎಂದೇ ಹೆಸರುವಾಸಿಯಾದ ಅವರ ನಿಜ ಹೆಸರು ಎಸ್. ಕೃಷ್ಣಮೂರ್ತಿ. ಅವರು ಕಮಲ್ ಹಾಸನ್, ರಜನಿಕಾಂತ್, ಅಜಿತ್, ಸೂರ್ಯ ಮತ್ತು ವಿಜಯ್ ಅವರಂತಹ ಪ್ರಮುಖ ನಟರೊಂದಿಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಕಾರಿನೊಳಗೆ ಶವವಾಗಿ ಪತ್ತೆಯಾದ ಮಲಯಾಳಂ ನಟ ವಿನೋದ್ ಥಾಮಸ್
ಸನ್ ಟಿವಿಯಲ್ಲಿ ಪ್ರಸಾರವಾದ ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಅಸಥ ಪೊವತು ಯಾರು?’ ದಲ್ಲಿ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. ಬಾಬ್ ಸಂಗೀತಗಾರರೂ ಹೌದು. ತೆನಾಲಿ ಚಿತ್ರದಲ್ಲಿ ಡೈಮಂಡ್ ಬಾಬು ಮತ್ತು ಫ್ರೆಂಡ್ಸ್ ಚಿತ್ರದಲ್ಲಿ ಮ್ಯಾನೇಜರ್ ಸುಂದರೇಶನ್ ಪಾತ್ರದಲ್ಲಿ ಕಾಣಿಸಿಕೊಂಡು ಜನರನ್ನು ರಂಜಿಸಿದ್ದಾರೆ.
