ವೃತ್ತಿಯಿಂದ ನಿವೃತ್ತಿ ಅನಿವಾರ್ಯವಾಗಿದ್ದು, ನಿವೃತ್ತಿಯವರೆಗೆ ದುಡಿಯುವದೂ ಅನಿವಾರ್ಯ ಎಂದು ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಬಶೀರ್ ಅಹ್ಮದ್ ಜಹಗೀರದಾರ್ ಹೇಳಿದರು.
ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಗುದಗನವರ ಮತ್ತು ಹೆಚ್ ಕೆ ನಾಯಕವಾಡಿ ಜುಲೈ 31ರಂದು ಸೇವಾ ನಿವೃತ್ತರಾದ ನಿಮಿತ್ತ ಧಾರವಾಡದ ಅಂಜುಮನ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ನಾಗರಾಜ ಗುದಗನವರ ಮತ್ತು ಹೆಚ್ ಕೆ ನಾಯಕವಾಡಿ ಇವರಿಬ್ಬರ ಸೇವೆಯೂ ಗಮನಾರ್ಹವಾಗಿದೆ. ಗುದಗನವರ ನಿಷ್ಠೆ ಮತ್ತು ಪ್ರೀತಿಯಿಂದ ನಮ್ಮ ಸಂಸ್ಥೆಗೆ ನಿಸ್ವಾರ್ಥ ಸೇವೆ ನೀಡಿದ್ದಾರೆ. ಅವರಿಗೆ ನಿವೃತ್ತಿ ಜೀವನದಲ್ಲಿ ದೇವರು ಆರೋಗ್ಯ ಮತ್ತು ನೆಮ್ಮದಿಯನ್ನು ನೀಡಲಿ” ಎಂದು ಹಾರೈಸಿದರು.
ಡಾ. ಎ ಎಸ್ ಬಳ್ಳಾರಿ, ಡಾ. ರುದ್ರೇಶ್ ಮೇಟಿ, ಪ್ರೊ.ನಾಗರಾಜ ಕನಕಣಿ, ರಜಿಯಾ ತಹಶೀಲ್ದಾರ್ ಸೇವಾ ನಿವೃತ್ತಿಯೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡರು. ಧಾರವಾಡದ ಲಯನ್ಸ್ ಕ್ಲಬ್ ಗ್ಯಾಲಕ್ಸಿ ವತಿಯಿಂದ ನಿವೃತ್ತರನ್ನು ಸನ್ಮಾನಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಫಲಶೃತಿ | ಬಸ್ ನಿಲ್ದಾಣದಲ್ಲಿದ್ದ ಜ್ಯೋತಿಷ್ಯದ ಜಾಹೀರಾತು ಫಲಕ ತೆರವು: ವರದಿಗೆ ಅಧಿಕಾರಿಗಳ ಸ್ಪಂದನೆ
ಡಾ. ಎನ್ ಬಿ ನಾಲತವಾಡ ನಿರೂಪಣೆ ಮಾಡಿದರು, ಡಾ. ರುದ್ರೇಶ ಮೇಟಿ ವಚನ ಪಠಣ ಮಾಡಿದರು, ಕುಮಾರಿ ಅಕ್ಸಾ ಮುಲ್ಲಾ ಶ್ಲೋಕ ಪಠಿಸಿದರು, ಸೌಭಾಗ್ಯ ಜಾದವ್ ಸ್ವಾಗತಿಸಿದರು, ಡಾ. ಗೌರಿ ಕೇರಿಮಠ ಪರಿಚಯಿಸಿದರು ಹಾಗೂ ಡಾ. ಬೀಬಿ ಆಯಿಷಾ ಚಕೋಲಿ ವಂದಿಸಿದರು.
ರಫೀಕ ಶಿರಹಟ್ಟಿ, ಕೈರುದ್ದೀನ್ ಶೇಕ್, ಅಬ್ದುಲ್ ಅಜೀಜ್ ಬಡ್ಬಡೇ, ರಿಯಾಜ ನನ್ನೇ ಸಾಬಣ್ಣವರ್, ಖಲಿಲ ದಾಸನಕೊಪ್, ಡಾ ಶಿವಾನಂದ ಶೆಟ್ಟರ್, ಪ್ರೊ. ಡಿ ಎಮ್ ನಿಡವನಿ, ಡಾ ಎನ್ ಎಮ್ ಮಕಂದಾರ್, ಡಾ ಎಲ್ ಆರ್ ಅಂಗಡಿ, ರೇಣುಕಾ ಗುದಗನವರ, ಸುರೇಶ ಗುದಗನವರ, ಡಾ ರತ್ನಾ ಕಡಪಟ್ಟಿ, ಡಾ. ರಾಜಶ್ರೀ ಗುದಗನವರ, ಶಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.