ಮುಸ್ಲಿಂ ಧರ್ಮದ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕನನ್ನು ವರ್ಗಾವಣೆ ಮಾಡಲು ಮಕ್ಕಳ ಜೀವವನ್ನೆ ಬಲಿ ಪಡೆಯಲು ಸಂಚು ರೂಪಿಸಿ ಸರ್ಕಾರಿ ಶಾಲೆಯ ಕುಡಿಯುವ ನೀರಿನ ಟ್ಯಾಂಕರ್‌ಗೆ ವಿಷ ಬೆರೆಸಿದ್ದ ಧರ್ಮಾಂದರ ಹಿನ ಕೃತ್ಯ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಘಟನೆ ವಿವರ
ಹೂಲಿಕಟ್ಟಿ ಸರ್ಕಾರಿ ಶಾಲೆಯಲ್ಲಿ 41 ವಿದ್ಯಾರ್ಥಿಗಳು ಓದುತ್ತಿದ್ದಾರೆ. 15 ದಿನಗಳ ಹಿಂದೆ ಶಾಲಾ ಮಕ್ಕಳು ಕುಡಿಯುವ ನೀರಿನ ಟ್ಯಾಂಕ್ ಗೆ ಧರ್ಮಾಂದರು ವಿಷ ಬೆರೆಸಿದ್ದರು,ಈ ಘಟನೆಯಿಂದ 11 ಶಾಲಾ ಮಕ್ಕಳು ನೀರು ಕುಡಿದು ಅಸ್ವಸ್ಥಗೊಂಡಿದ್ದರು ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ ಪರಿಣಾಮ ಯಾವುದೆ ಪ್ರಾಣಹಾನಿ ಸಂಭವಿಸಿರಲಿಲ್ಲ.
ಪೊಲೀಸರ ತನಿಖೆಯಲ್ಲಿ, ಈ ಕೃತ್ಯದ ಹಿಂದಿರುವ ಉದ್ದೇಶ ಅನ್ಯ ಧರ್ಮದ ಮುಖ್ಯ ಶಿಕ್ಷಕ ಸುಲೇಮಾನ್ ಗೋರಿನಾಯಕ್ ಅವರನ್ನು ಬೇರೆಡೆ ವರ್ಗಾವಣೆ ಮಾಡಿಸುವುದು ಎಂಬುದು ಬಹಿರಂಗವಾಯಿತು. ಆರೋಪಿಗಳು, ಮಕ್ಕಳಿಗೆ ವಿಷಯುಕ್ತ ನೀರು ನೀಡಿದರೆ ಹೊಣೆ ಮುಖ್ಯ ಶಿಕ್ಷಕರ ಮೇಲೇ ಬಿದ್ದು, ಅವರನ್ನು ಸ್ಥಳಾಂತರ ಮಾಡಲಾಗುತ್ತದೆ ಎಂಬ ದುಷ್ಟಯೋಜನೆ ರೂಪಿಸಿದ್ದರು.
ಪೊಲೀಸರ ಕಾರ್ಯಾಚರಣೆ
ಪೋಲಿಸರಿಂದ ತ್ವರಿತ ತನಿಖೆ ನಡೆಯಿತು. ತಾಂತ್ರಿಕ ಸಾಕ್ಷ್ಯ ಮತ್ತು ಸ್ಥಳೀಯ ಮಾಹಿತಿ ಆಧರಿಸಿ ಆರೋಪಿಗಳಾದ ಸಾಗರ ಪಾಟೀಲ – ಶ್ರೀರಾಮ ಸೇನೆಯ ಸವದತ್ತಿ ತಾಲೂಕು ಅಧ್ಯಕ್ಷ, ಕೃಷ್ಣಾ ಮಾದರ,ನಾಗನಗೌಡ ಪಾಟೀಲ ಎಂಬ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಆದೇಶದಂತೆ ಜೈಲಿಗೆ ಕಳುಹಿಸಲಾಗಿದೆ.
ಸಂಚು ಹೇಗೆ ನಡೆಯಿತು?
ಸಾಗರ ಪಾಟೀಲ, ಕೃಷ್ಣಾ ಮಾದರನಿಗೆ ವಿಷ ಬೆರೆಸುವ ಕೆಲಸ ಹೇಳಿದನು. ಕೃಷ್ಣಾ, ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದ ವಿಚಾರ ತಿಳಿದಿದ್ದ ಆರೋಪಿಗಳು, “ನಮ್ಮ ಮಾತು ಕೇಳದಿದ್ದರೆ ನಿನ್ನ ಪ್ರೇಮ ಸಂಬಂಧವನ್ನು ಬಹಿರಂಗಪಡಿಸುತ್ತೇವೆ” ಎಂದು ಬೆದರಿಸಿದರು.
ಭಯಗೊಂಡ ಕೃಷ್ಣಾ, ಶಾಲೆಯ ಒಂದು ಬಾಲಕನಿಗೆ ಚಾಕೋಲೆಟ್, ಕುರ್‌ಕುರೆ ಮತ್ತು ₹500 ನೀಡಿ, ಟ್ಯಾಂಕರ್‌ಗೆ ವಿಷ ಬೆರೆಸುವಂತೆ ಪ್ರಚೋದಿಸಿದನು. ಬಾಲಕ ಸೂಚಿಸಿದಂತೆ ಕೃತ್ಯ ಎಸಗಿ, ಬಳಸಿದ ಬಾಟಲಿಯನ್ನು ಅಲ್ಲೇ ಎಸೆದನು.
ಈ ಕೃತ್ಯ ಕೇವಲ ಮುಸ್ಲಿಂ ಧರ್ಮದ ಶಿಕ್ಷಕನ ವಿರುದ್ಧವಲ್ಲ, ಅದು ಮಾನವೀಯತೆಯ ವಿರುದ್ಧ. ಧರ್ಮ, ಜಾತಿ, ರಾಜಕೀಯ ಕಾರಣಕ್ಕೆ, ಮಕ್ಕಳ ಜೀವವನ್ನು ಬಲಿ ನೀಡಲು ಹೊಂಚು ಹಾಕುವ ಇಂತಹ ಧರ್ಮಾಂದರ ಬಣ್ಣ ಬಯಲಾಗಿದೆ
ಮಕ್ಕಳ ನಗು, ಅವರ ಕನಸು, ಅವರ ನಿರಪರಾಧತೆ – ಇವುಗಳೆಲ್ಲ ಧಾರ್ಮಿಕ, ರಾಜಕೀಯ ಅಜೆಂಡಾಗಳ ಬಲಿಯಾಗುತ್ತಿರುವುದು ನಾಚಿಕೆಗೇಡಿತನದ ಶಿಖರ. ನಮ್ಮದು “ಸಂಸ್ಕೃತಿಯ ದೇಶ” ಎಂದು ಹೇಳಿಕೊಳ್ಳುವ ಧಾರ್ಮಿಕ ಮುಖಂಡರು ಇಂತಹ ನಾಚಿಕೆಗೆಡಿನ ಕೃತ್ಯಕ್ಕೆ ಕೈ ಹಾಕಿರುವದು ಶೋಚನೀಯ ಸಂಗತಿಯಾಗಿದೆ. ಇಂತಹ ಧರ್ಮಾಂದರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.