ಮಂಗಳೂರು | ತುಳು ಅಕಾಡೆಮಿಯಿಂದ ದಾಖಲೀಕರಣ ಘಟಕ ರೂಪಿಸುವ ಯೋಜನೆಯ ಅಗತ್ಯವಿದೆ: ಡಾ. ವೈ ಎನ್ ಶೆಟ್ಟಿ

Date:

Advertisements

ಭೂತಾರಾಧನೆ, ನಾಗಾರಾಧನೆ, ಯಕ್ಷಗಾನ ಸೇರಿದಂತೆ ತುಳುನಾಡಿನ ವೈಶಿಷ್ಟ್ಯತೆಗಳನ್ನು ವ್ಯವಸ್ಥಿತವಾಗಿ ದಾಖಲಿಸುವ ಕಾರ್ಯ ಆಗಬೇಕಾಗಿದ್ದು, ಇದಕ್ಕಾಗಿ ತುಳು ಅಕಾಡೆಮಿಯಿಂದ ‘ದಾಖಲೀಕರಣ ಘಟಕ’ ಸ್ಥಾಪನೆ ಮಾಡುವ ಅವಶ್ಯಕತೆ ಇದೆ ಎಂದು ಹಿರಿಯ ಜಾನಪದ ವಿದ್ವಾಂಸ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಡಾ ವೈ ಎನ್ ಶೆಟ್ಟಿ ಅಭಿಪ್ರಾಯಪಟ್ಟರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಮಂಗಳೂರಿನ ಉರ್ವಸ್ಟೋರ್‌ನ ತುಳುಭವನದಲ್ಲಿ ಜರಗಿದ ರಮೇಶ್ ಮಂಜೇಶ್ವರ ನಿರ್ದೇಶನದ ‘ಆಟಿದ ಭೂತಾರಾದನೆ’ ಸಾಕ್ಷ್ಯಚಿತ್ರ ಬಿಡುಗಡೆ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಹಿಂದೆ ದೈವಾರಾಧನೆ ಸರಳವಾಗಿತ್ತು. ಆದರೆ ಈಗ ಅದನ್ನು ಸಂಕೀರ್ಣಗೊಳಿಸಲಾಗಿದೆ ಎಂಬುದನ್ನು ಹಿರಿಯ ದೈವನರ್ತಕರು ಹೇಳುತ್ತಿದ್ದಾರೆ. ಅಲ್ಲದೆ ದೈವರಾಧನೆಯಲ್ಲಿ ಬದಲಾವಣೆಗಳಾಗುತ್ತಬಂದಿವೆ. ಪ್ರಬುದ್ಧ ತುಳುಭಾಷೆಯನ್ನು ಪಾಡ್ದನ, ನುಡಿಗಟ್ಟು, ಮದಿಪು ಮೊದಲಾದವುಗಳಲ್ಲಿ ಮಾತ್ರ ಕಾಣಲು ಸಾಧ್ಯವಿದೆ. ಇಂತಹ ಮೂಲಗಳನ್ನು ಉಳಿಸಿಕೊಳ್ಳಬೇಕಾಗಿದೆ. ಈ ವಿಚಾರಗಳನ್ನು ಅಕಾಡೆಮಿಯಿಂದಲೇ ದಾಖಲೀಕರಣ ಮಾಡುವ ಜತೆಗೆ ಇತರರ ಬಳಿ ಇರುವ ದಾಖಲೆಗಳನ್ನೂ ಕೂಡ ಸಂಗ್ರಹಿಸುವ ಕೆಲಸವಾಗಬೇಕು” ಎಂದು ಡಾ ವೈ ಎನ್ ಶೆಟ್ಟಿ ಹೇಳಿದರು.

Advertisements

“ಆಟಿದ ಭೂತಾರಾಧನೆ, ನೇಮದ ಬಗ್ಗೆ ಅಭಿಪ್ರಾಯ ಮಂಡಿಸಿದ ಪೆರುವಾಯಿ ಮೂವರು ದೈವಂಗಳು ದೈವಸ್ಥಾನದ ಗುರಿಕಾರ ಸುಬ್ರಹ್ಮಣ್ಯ ಭಟ್ ಕೆ ಜೆ ಅವರು, ಆಟಿಯಲ್ಲಿ ಕೃಷಿ ಕೆಲಸ ಮುಗಿಯುವ, ಕಷ್ಟದ ಕಾಲ, ಕಷ್ಟ ದೂರ ಮಾಡಲು, ಬೆಳೆಯನ್ನು ಸಂರಕ್ಷಿಸಲು ಪಂಜುರ್ಲಿ ದೈವಕ್ಕೆ ಪ್ರಾರ್ಥನೆ ಮಾಡಲಾಗುತ್ತಿತ್ತು. ಪೆರುವಾಯಿಯಲ್ಲಿ ಆಟಿಯಲ್ಲಿ ನಡೆಯುವ ದೈವಾರಾಧನೆ ವಿಶಿಷ್ಟವಾಗಿದೆ” ಎಂದು ಹೇಳಿದರು.‌

ದಾಖಲೀಕರಣ ಘಟಕ

ನಿವೃತ್ತ ಕೃಷಿಕ ಎಂ ಕೆ ಕುಕ್ಕಾಜೆ ಮಾತನಾಡಿ, “ಆಟಿಯಲ್ಲಿ ತುಳುನಾಡಿನ ದೈವ ಘಟ್ಟ ಹತ್ತುತ್ತದೆ ಎಂಬುದು ಸರಿಯಲ್ಲ, ದೈವಗಳು ಒಂದು ಸ್ಥಳದಲ್ಲಿ ನೆಲೆಯಾದ ಅನಂತರ ವಿಧಿ ಪ್ರಕಾರವೇ ಅವುಗಳನ್ನು ಕೊಂಡೊಯ್ಯಬೇಕಾಗುತ್ತದೆ. ಆಟಿ ಸಮಯದಲ್ಲಿ ತುಳುನಾಡಿನಲ್ಲಿ ಹಿಂದೆ ಕಷ್ಟದ ಕಾಲವಿತ್ತು. ಹಾಗಾಗಿ ದೈವ ಆರಾಧನೆ ಮಾಡುವವರು ಘಟ್ಟ ಪ್ರದೇಶಕ್ಕೆ ಉದ್ಯೋಗ ನಿಮಿತ್ತ ಹೋಗಿಬರುತ್ತಿದ್ದರು. ಅದೇ ರೀತಿ ಆಟಿಯಲ್ಲಿ ದೈವರಾಧನೆ ಮಾಡಬಾರದು ಎಂಬುದಾಗಿಯೂ ಇಲ್ಲ. ಬಡತನವಿದ್ದುದರಿಂದ, ವ್ಯವಸ್ಥೆ ಇಲ್ಲದ ಕಾರಣಕ್ಕೆ ಕೆಲವರು ಆರಾಧನೆ ಮಾಡಿರಲಿಲ್ಲ” ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, “ತುಳುವಿನ ವೈಶಿಷ್ಟ್ಯತೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವುದಕ್ಕಾಗಿ ಅಕಾಡೆಮಿಯು ದಾಖಲೀಕರಣಕ್ಕೆ ಆದ್ಯತೆ ನೀಡುತ್ತಿದೆ” ಎಂದು ಹೇಳಿದರು.

ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಗಟ್ಟಿ ಮಳಿ ಮಾತನಾಡಿ, “ಕಾಸರಗೋಡು, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ತುಳುನಾಡು ರೂಪುಗೊಳ್ಳಬೇಕಾಗಿದೆ” ಎಂದು ಆಶಯ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಮುಸ್ಲಿಂ ಶಿಕ್ಷಕನ ವರ್ಗಾವಣೆಗೆ ಸಂಚು, ನೀರಿನ ಟ್ಯಾಂಕ್​​ಗೆ ವಿಷ ಬೆರೆಸಿದ ಶ್ರೀರಾಮಸೇನೆ ಮುಖಂಡ: ಸಿಎಂ ಆಕ್ರೋಶ

ದೈವಾರಾಧಕರಾದ ಆನಂದ ನಲಿಕೆ, ಐತಪ್ಪ ಆರಿಕ್ಕಾಡಿ ಕುಂಬಳೆ, ಪೆರುವಾಯಿ ಗುತ್ತಿನ ಹಿರಿಯರಾದ ರಾಜೇಂದ್ರನಾಥ್ ರೈ ಪ್ರತಿಕ್ರಿಯೆ ನೀಡಿದರು. ಸಾಕ್ಷ್ಯಚಿತ್ರದ ನಿರ್ದೇಶಕ ರಮೇಶ್ ಮಂಜೇಶ್ವರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಬೂಬ ಪೂಜಾರಿ ಮಳಲಿ, ಅಕಾಡೆಮಿಯ ಮಾಜಿ ಅಧ್ಯಕ್ಷ ಎ ಸಿ ಭಂಡಾರಿ, ಅಕಾಡೆಮಿಯ ಸದಸ್ಯ ಪಾಂಗಾಳ ಬಾಬು ಕೊರಗ ಇದ್ದರು.

ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯರಾದ ಕುಂಬ್ರ ದುರ್ಗಾ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು, ಸದಸ್ಯ ಸಂತೋಷ್ ರೈ ಹಿರಿಯಡ್ಕ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X