ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಯೋರ್ವ, ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಆಗಸ್ಟ್ 2 ರ ಸಂಜೆ ನಡೆದಿದೆ.
ಬಸವರಾಜು (38) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಂಜೆ 7 ಗಂಟೆ ಸುಮಾರಿಗೆ ಕಾರಾಗೃಹದ ಶರಾವತಿ ಬ್ಯಾರಕ್ ನ 42 ನೇ ಕೊಠಡಿಯ ಶೌಚಾಲಯದ ಕಿಟಕಿ ಸರಳಿಗೆ ತನ್ನ ಲುಂಗಿಯಿಂದ ನೇಣು ಬಿಗಿದುಕೊಂಡಿದ್ದ.

ಗಸ್ತಿನಲ್ಲಿದ್ದ ಜೈಲು ಸಿಬ್ಬಂದಿಗಳು ತಕ್ಷಣವೇ ಆತನನ್ನು ವಾಹನವೊಂದರಲ್ಲಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿದ್ದನ್ನು ಖಚಿತಪಡಿಸಿದ್ದಾರೆ.
ಬಸವರಾಜು ವಿರುದ್ದ ಪತ್ನಿಯ ಕೊಲೆ ಮಾಡಿದ ಆರೋಪವಿತ್ತು. ಈ ಸಂಬಂಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ದ ಪ್ರಕರಣ ದಾಖಲಾಗಿತ್ತು. ಜೂನ್ 16 ರಿಂದ ಆತ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ.