ಸಾಗರ, ಗೋವಾದಿಂದ ಮೈಸೂರಿಗೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರಿಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ, ತಲಾ1 15 ಸಾವಿರ ದಂಡ ವಿಧಿಸಿದೆ.
ಮೈಸೂರಿನ ರಾಮದಾಸ್ ಮತ್ತು ಗಿರೀಶ್ ಶಿಕ್ಷೆಗೆ ಗುರಿಯಾದವರು. 2022ರ ಏಪ್ರಿಲ್ 17 ರಂದು ಕಾರಿನಲ್ಲಿ 48.5 ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಬಳಿಕ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.
Hivನ್ಯಾಯಾಧೀಶರಾದ ಎಂ. ಮಾದೇಶ್, ವಿಚಾರಣೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ವಕೀಲ ಚಂದ್ರಶೇಖರ್ ಎಚ್. ಎಸ್. ವಾದಿಸಿದ್ದರು.