ಈ ವಾರದ ಆರಂಭದಲ್ಲಿ ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಪ್ರವಾಸಕ್ಕೆಂದು ತೆರಳಿದ್ದ ನಾಲ್ವರು ಭಾರತೀಯ ಹಿರಿಯ ನಾಗರಿಕರು ಶವವಾಗಿ ಪತ್ತೆಯಾಗಿದ್ದಾರೆ. ಶನಿವಾರ ರಾತ್ರಿ ವಾಹನ ಅಪಘಾತದಲ್ಲಿ ಅವರು ಸಾವನ್ನಪ್ಪಿರುವುದು ಖಚಿತವಾಗಿದೆ ಎಂದು ಮಾರ್ಷಲ್ ಕೌಂಟಿ ಶೆರಿಫ್ ಕಚೇರಿ ದೃಢಪಡಿಸಿದೆ.
ವಾಹನವು ಶನಿವಾರ ರಾತ್ರಿ ಸುಮಾರು 9:30ರ ಸುಮಾರಿಗೆ ಬಿಗ್ ವೀಲಿಂಗ್ ಕ್ರೀಕ್ ರಸ್ತೆಯ ಬದಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಆಶಾ ದಿವಾನ್, ಕಿಶೋರ್ ದಿವಾನ್, ಶೈಲೇಶ್ ದಿವಾನ್ ಮತ್ತು ಗೀತಾ ದಿವಾನ್ ಎಂದು ಗುರುತಿಸಲಾಗಿದೆ.
ಇದನ್ನು ಓದಿದ್ದೀರಾ? ಪೆನ್ಸಿಲ್ವೇನಿಯಾದಲ್ಲಿ ಕಾರು ಅಪಘಾತ; ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವು
ಎಲ್ಲರೂ 80 ವರ್ಷ ಪ್ರಾಯದವರಾಗಿದ್ದು, ಈ ವಾರದ ಆರಂಭದಲ್ಲಿ ನ್ಯೂಯಾರ್ಕ್‌ನ ಬಫಲೋದಿಂದ ಪಿಟ್ಸ್‌ಬರ್ಗ್ ಮತ್ತು ಪಶ್ಚಿಮ ಪೆನ್ಸಿಲ್ವೇನಿಯಾಗೆ ಪ್ರವಾಸಕ್ಕೆ ಹೊರಟ್ಟಿದ್ದರು. ವರ್ಜೀನಿಯಾಕ್ಕೆ ತೆರಳುವ ಮೊದಲು ನಾಪತ್ತೆಯಾಗಿದ್ದಾರೆ.
ಶೆರಿಫ್ ಮೈಕ್ ಡೌಘರ್ಟಿ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ಅಪಘಾತದ ಕಾರಣ ತನಿಖೆಯಲ್ಲಿದೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು.
