ಬಂಡಾಯದ ನಾಡು ನರಗುಂದದಲ್ಲಿ ತಾಲ್ಲೂಕು, ತಾಲ್ಲೂಕಿನ ರೈತರು ಯೂರಿಯಾ ಗೋಬರಕ್ಕಾಗಿ ರಾಷ್ಟಿಯ ಹೆದ್ದಾರಿ ಬಂದ್ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯಲ್ಲಿ ನರಗುಂದ ಪಟ್ಟಣದಲ್ಲಿ ರೈತರು ಯೂರಿಯಾ ಗೊಬ್ಬರವನ್ನು ಸಮರ್ಪಕವಾಗಿ ಒದಗಿಸುವಂತೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ದತ್ತಾತ್ರೇಯ ಜೋಗನ್ನವರ ಮಾತನಾಡಿ, ತಾಲ್ಲೂಕಿನ ರೈತರು ನಿರಂತರವಾಗಿ ಕಳೆದ 15-20 ದಿನಗಳಿದ ಮಳೆಯಲ್ಲಿಯೇ ಯೂರಿಯಾ ಗೊಬ್ಬರಕ್ಕಾಗಿ ಸೊಸೈಟಿ ಮತ್ತು ಅಗ್ರೋಗಳ ಮುಂದೆ ದಿನಪತ್ರಿ ನಿತ್ತು ಬೇಸತ್ತು ಹೋಗಿದ್ದಾರೆ. ಸಣ್ಣಹಿಡುವಳಿ ದಾರರಿಗೆ ಬೇಕಾದ ಯೂರಿಯಾ ಗೊಬ್ಬರ ಕೊಡದೆ ರೈತರಿಗೆ ಅನ್ಯಾಯ ಮಾಡುತಿದ್ದಾರೆ. ಇದನ್ನು ಆದಷ್ಟು ಬೇಗ ಸರಿಪಡಿಸಿ ರೈತರಿಗೆ ಬೆಳೆ ಬೆಳೆಯಲು ಮತ್ತು ಜೀವನ ಕಟ್ಟಿಕೊಳ್ಳಲು ಸಹಾಯ ಮಾಡಬೇಕು” ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

ಯುವ ರೈತ ಹೊರಟಗಾರ ನವೀನ ಕುಮಾರ್ ಮಾತನಾಡಿ, ರೈತರಿಗೆ ನೀಡಬೇಕದಾ ಗೊಬ್ಬರವನ್ನು ಕೂಡಲೇ ನೀಡಬೇಕು. ಜೊತೆಗೆ ಯಾರು ಅರ್ಹ ರೈತರು ಇರುವರೋ ಅವರಿಗೆ ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಳಪೆ ಬೀಜ-ನಕಲಿ ಗೊಬ್ಬರದ ಹಾವಳಿ; ರೈತರ ನೆರವಿಗೆ ನಿಲ್ಲದ ಇಲಾಖೆ
ಈ ಸಂದರ್ಭದಲ್ಲಿ ಗುರುನಾಥ ಕೆಂಗಾರಕರ, ಇಸಾಮಾಯಿಲ್ ಜಮಾದಾರ್, ಜ್ಞಾನೇಶ್ ಮುನೆನಕೊಪ್ಪ, ಶಂಕ್ರಪ್ಪ ಅಪ್ಪೋಜಿ, ಬಸುರಾಜ್ ಐನಾಪುರ್, ಕಸ್ತೂರಿಬಾಯಿ ಐನಾಪುರ, ಮಲ್ಲವ್ವ ತೆಗಿನಮನಿ, ಸಹದೇವ ಮಾದರ, ಶಿವಾನಂದ ಪೂಜಾರ ಇನ್ನೂ ಅನೇಕ ರೈತರು ಉಪಸ್ಥಿತರಿದ್ದರು.