ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ 10 ಎಂವಿಎ 110/11 ಕೆವಿ ಪರಿವರ್ತಕ ಅಳವಡಿಕೆ ಹಾಗೂ 110/11 ಮತ್ತು 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಆಗಸ್ಟ್ 3ರಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು —
ರಾಮಾಪೂರ ಸೈಟ್, ಮಾಮನಿಕೇರಿ ರಸ್ತೆ, ಎಸ್‌ಎಲ್‌ಎಓ ಕ್ರಾಸ್, ಗೋಕಾಕ್ ಮಿಲ್, ಪದಕಿಪುರಂ, ಹೊಸ ಬಸ್ ನಿಲ್ದಾಣ, ತಾಲೂಕು ಆಸ್ಪತ್ರೆ, ಕೆಂಚಲಾರಕೊಪ್ಪ, ಪುರಸಭೆ, ಸೌಗಂಧಿಪುರ, ಕುಂಬಾರ ಓಣಿ, ಕರೀಕಟ್ಟಿ, ಅಸುಂಡಿ, ಶಿಂಗಾರಗೊಪ್ಪ, ಸುತಗಟ್ಟಿ, ಹಿಟ್ಟಣಗಿ, ಏಣಗಿ, ಕುರುವಿನಕೊಪ್ಪ, ಕಟಮಳ್ಳಿ, ಗೊರವನಕೊಳ್ಳ, ಯಡ್ರಾಂವಿ, ಬೆಟಸೂರ, ಹಿರೇಉಳ್ಳಿಗೇರಿ, ಇನಾಮಹೊಂಗಲ, ಸಂಗ್ರೇಶಕೊಪ್ಪ, ಯಡಹಳ್ಳಿ, ಕೆಂಚರಾಮನಹಾಳ ಹಾಗೂ ಶಿಂಗಾರಗೊಪ್ಪ ಜಾಕವೆಲ್.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ : ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು 8 ಕಿ.ಮೀ ಹೊತ್ತುಕೊಂಡು ನಡೆದರು
ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30ರವರೆಗೆ ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು —
ಕೆಹೆಚ್‌ಬಿ ಕಾಲೊನಿ, ಬಸವ ಸದನ, ರೇಣುಕಾ ನಗರ, ಅಂಬೇಡ್ಕರ್ ನಗರ, ಎಪಿಎಂಸಿ, ಕಟಕೋಳ ಬ್ಯಾಂಕ್, ಆನಿ ಅಗಸಿ, ಬಂಡಿ ಓಣಿ, ಶಾಂತಿ ನಗರ, ಯಲ್ಲಮ್ಮನಗುಡ್ಡ, ಯಲ್ಲಮ್ಮಗುಡ್ಡ ತಾಂಡಾ, ಚುಳಕಿ, ಚಿಕ್ಕುಂಬಿ, ಹಿರೇಕುಂಬಿ, ಹಂಚಿನಾಳ, ದಡೇರಕೊಪ್ಪ, ಹರ್ಲಾಪೂರ, ಉಗರಗೋಳ, ಬೆಟಸೂರ, ಯಡ್ರಾಂವಿ, ಗೊರವನಕೊಳ್ಳ, ಕುರುವಿಕೊಪ್ಪ, ಕಟಮಳ್ಳಿ, ಹಿರೇಉಳ್ಳಿಗೇರಿ, ಚಿಕ್ಕಉಳ್ಳಿಗೇರಿ, ಇನಾಮಹೊಂಗಲ, ಸಂಗ್ರೇಶಕೊಪ್ಪ, ಯಡಹಳ್ಳಿ, ಅಸುಂಡಿ, ಶಿಂಗಾರಗೊಪ್ಪ, ಸುತಗಟ್ಟಿ, ಹಿಟ್ಟಣಗಿ, ಏಣಗಿ.
ಹೆಸ್ಕಾಂ ಅಧಿಕಾರಿಗಳು, ಕಾಮಗಾರಿ ಅವಧಿಯಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ವಿನಂತಿಸಿದ್ದಾರೆ.